ಸನ್ಮಾರ್ಗ ವಾರ್ತೆ-
ವಾಷಿಂಗ್ಟನ್, ಜ. 9: ಇರಾನಿನೊಂದಿಗೆ ಘರ್ಷಣೆಗೆ ಇಳಿದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನ ವಿನಾಶಕಾರಿ ವರ್ತನೆಯನ್ನು ಬಹಳ ಕಾಲ ಜಗತ್ತು ಸಹಿಸದು ಎಂದಿದ್ದಾರೆ. ಇರಾನ್ ವಿರುದ್ಧ ಬ್ರಿಟನ್, ಜರ್ಮನಿ, ಫ್ರಾನ್ಸ್, ರಷ್ಯ ಮತ್ತು ಚೀನ ಒಟ್ಟುಗೂಡಬೇಕೆಂದು ಅವರು ಹೇಳಿದರು. ರಾಷ್ಟ್ರವನ್ನು ಉದ್ದೇಶಿಸಿ ಮಾತಾಡಿದ ಟ್ರಂಪ್ ಈಗ ಬ್ರಿಟನ್, ಜರ್ಮನಿ, ಫ್ರಾನ್ಸ್, ರಷ್ಯ, ಚೀನಗಳು ಸತ್ಯವನ್ನು ಅರಿತುಕೊಳ್ಳಬೇಕಿದೆ. ಜೊತೆಗೆ ಇರಾನ್ ಜೊತೆ 2013ರಲ್ಲಿ ಮಾಡಿಕೊಂಡ ಮೂರ್ಖ ಪರಮಾಣು ಒಪ್ಪಂದವನ್ನು ರದ್ದುಪಡಿಸಬೇಕಾಗಿದೆ ಎಂದು ಹೇಳಿದರು.
ಐದು ದೇಶಗಳಿಗೆ ಮನವಿ ಮಾಡಿದ ಟ್ರಂಪ್ ನಾವು ಜೊತೆ ಸೇರಿ ಇರಾನಿನೊಂದಿಗೆ ಒಂದು ಹೊಸ ವ್ಯವಹಾರ ಮಾಡಬೇಕಾಗಿದೆ. ಜಗತ್ತನ್ನು ಸುರಕ್ಷಿತಗೊಳಿಸಲು ಅದು ಅಗತ್ಯವಾಗಿದೆ. ಜಗತ್ತಿನ ದೇಶಗಳು ಮಧ್ಯಪ್ರಾಚ್ಯ ಸಹಿತ ಇತರ ಕ್ಷೇತ್ರಗಳಲ್ಲಿ ಇರಾನ್ ಅಪಾಯಕಾರಿಯಾಗಿ ಬಹಳ ಹಿಂದಿನಿಂದಲೂ ಮಾರ್ಪಡುತ್ತಾ ಬಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಆದರೆ ಈಗ ಆ ಸಮಯ ಮುಗಿಯಿತು. ಜೊತೆಗೆ ಇರಾನ್ ಭಯೋತ್ಪಾದನೆಗೆ ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು. ಇರಾನ್ ಭಯೋತ್ಪಾದನೆಯ ಪ್ರಾಯೋಜಕ ದೇಶವಾಗಿದೆ. ಇವರು ಪರಮಾಣು ಆಯುಧ ಸಂಪಾದಿಸಿದರೆ ಅದು ಜಗತ್ತಿಗೆ ಬೆದರಿಕೆಯಾಗಲಿದೆ. ಹಾಗಾಗಲು ನಾವು ಎಂದೂ ಬಿಡಲಾರೆವು.
ಕಳೆದವಾರ ಜಗತ್ತಿನ ಅತಿದೊಡ್ಡ ಭಯೋತ್ಪಾದಕ ಕಾಸಿಂ ಸುಲೇಮಾನಿಯ ಕತೆ ಮುಗಿಸಲಾಯಿತು. ಅವರು ಅಮೆರಿಕಕ್ಕೆ ಅಪಾಯಕಾರಿಯಾಗಿದ್ದರು. ಸುಲೇಮಾನಿಯವರನ್ನು ಬಹಳ ಹಿಂದೆಯೇ ಕೊಲ್ಲಬೇಕಾಗಿತ್ತು. ಸುಲೈಮಾನಿಯವರನ್ನು ಕೊಂದು ನಾವು ಭಯೋತ್ಪಾದನೆಗೆ ದೊಡ್ಡ ಸಂದೇಶ ನೀಡಿದ್ದೇವೆ. ಇದೇವೇಳೆ, ಇರಾನ್ನ ಮಿಸೈಲ್ ದಾಳಿಯಲ್ಲಿ ಅಮೆರಿಕದ ಎಂಬತ್ತು ಯೋಧರು ಸಾವನ್ನಪ್ಪಿದ್ದನ್ನು ಟ್ರಂಪ್ ನಿರಾಕರಿಸಿದ್ದಾರೆ.












