ಇರಾಕಿನಲ್ಲಿರುವ ಅಮೆರಿಕದ ಧೂತವಾಸದ ಬಳಿ ರಾಕೆಟ್ ದಾಳಿ

0
665

ಸನ್ಮಾರ್ಗ ವಾರ್ತೆ-

ಬಗ್ದಾದ್, ಜ. 9: ಇರಾಕಿನ ರಾಜಧಾನಿ ಬಗ್ದಾದಿನಲ್ಲಿ ರಾಕೆಟ್ ದಾಳಿಯಾಗಿದೆ. ಅತ್ಯಂತ ಸುರಕ್ಷಿತ ಕ್ಷೇತ್ರವಾದ ಗ್ರೀನ್ ಝೊನ್‍ನಲ್ಲಿ ಅಮೆರಿಕ ರಾಯಭಾರ ಕಚೇರಿ ಸಮೀಪದಲ್ಲಿ ರಾಕೆಟ್ ದಾಳಿ ನಡೆದಿದೆ. ಜನರಿಗೆ ಅಪಾಯವಾಗಿಲ್ಲ ಎಂದು ಇರಾಕಿ ಸೇನೆ ಹೇಳಿದ್ದು ಎರಡು ಬಾರಿ ಮಿಸೈಲ್ ಬಡಿದಪ್ಪಳಿಸಿತೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ಇರಾಕಿನಲ್ಲಿರುವ ಅಮೆರಿಕದ ಎರಡು ಪ್ರಧಾನ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದ 24 ಗಂಟೆಯೊಳಗೆ ಹೊಸ ದಾಳಿ ನಡೆದಿದೆ.