ಸಾಕ್ಷ್ಯಗಳಿದ್ದರೆ ಲೋಯ ಪ್ರಕರಣದ ಮರು ತನಿಖೆ- ಮಹಾರಾಷ್ಟ್ರ ಸಚಿವ

0
632

ಸನ್ಮಾರ್ಗ ವಾರ್ತೆ-

ಮುಂಬೈ, ಜ. 9: ಸಾಕ್ಷ್ಯಗಳಿದ್ದರೆ ಸಿಬಿಐ ಜಡ್ಜ್ ಬಿ ಎಚ್ ಲೋಯರ ಸಾವಿನ ಕುರಿತು ಮರು ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಸಚಿವ ಹಾಗೂ ಎನ್‍ಸಿಪಿ ವಕ್ತಾರ ನವಾಬ್ ಮಾಲಿಕ್ ಹೇಳಿದರು. ಸಾಕ್ಷ್ಯಗಳೊಂದಿಗೆ ಯಾರಾದರೂ ದೂರು ನೀಡಿದರೆ ಪ್ರಕರಣದಲ್ಲಿ ಮರುವಿಚಾರಣೆ ನಡೆಯಲಿದೆ ಎಂದು ಅವರು ಹೇಳಿದರು. ಶಿವಸೇನೆಯ ಸಚಿವರೊಂದಿಗೆ ಮೂರು ಗಂಟೆಗಳ ಸಮಾಲೋಚನೆಯ ಬಳಿಕ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಎನ್‍ಸಿಪಿ ಅಧ್ಯಕ್ಷ ಶರದ್‍ ಪವಾರ್ ಜಸ್ಟಿಸ್ ಲೋಯ ಪ್ರಕರಣದಲ್ಲಿ ಮರುತನಿಖೆ ಸಾಧ್ಯವೆಂದು ತಿಳಿಸಿದ್ದರು. ರಾಜ್ಯದ ಗೃಹ ಸಚಿವ ಅನಿಲ್ ದೇಶ್‍ಮುಖ್‍ರು ಕೂಡ ಇದೇ ನಿಲುವು ವ್ಯಕ್ತಪಡಿಸಿದರು.

ಜಸ್ಟಿಸ್ ಲೋಯ ಪ್ರಕಣದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟು ತಳ್ಳಿಹಾಕಿತ್ತು. 2014 ಡಿಸೆಂಬರ್ ಒಂದರಂದು ಜಸ್ಟಿಸ್ ಬಿ ಎಚ್‍ ಲೋಯ ನಿಗೂಢವಾಗಿ ಮೃತಪಟ್ಟಿದ್ದರು.