ಸನ್ಮಾರ್ಗ ವಾರ್ತೆ
ಬರ್ಲಿನ್, ಜ. 17: ಜರ್ಮನಿಯ ರಾಜತಾಂತ್ರಿಕ ಜಗತ್ತಿನ ಪ್ರಸಿದ್ಧ ಇಸ್ಲಾಮಿಕ್ ವಿದ್ವಾ೦ಸ ಗ್ರಂಥ ಕರ್ತೃ ಡಾ. ಮುರಾದ್ ವಿಲ್ಫ್ರೆಡ್ ಹೋಫ್ಮೆನ್ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಜರ್ಮನಿಯ ವಿದೇಶ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದಾಗ 1980ರಲ್ಲಿ ಇಸ್ಲಾಂ ಸ್ವೀಕರಿಸಿ ಧರ್ಮದ ಕುರಿತ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಅವರು ನಿರಂತರ ಸಾಹಿತ್ಯ ರಚನೆ ಮಾಡಿದರು. ಇಸ್ಲಾಮ್ ಮತ್ತು ಪಾಶ್ಚಾತ್ಯರ ನಡುವೆ ಸೇತುವೆಯಾಗಿ ವರ್ತಿಸಿದರು.
ಅಲ್ಜೀರಿಯಾ, ಮೊರೊಕ್ಕೊ ದೇಶದಲ್ಲಿ ಜರ್ಮನಿಯ ರಾಯಭಾರಿಯಾದ ಬಳಿಕ ನ್ಯಾಟೊ ಇನ್ಫಾರ್ಮೇಶನ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇಸ್ಲಾಂ: ದ ಆಲ್ಟರ್ ರ್ನೇಟಿವ್, ಜರ್ನಿ ಟು ಮಕ್ಕ ಮೊದಲಾ ಪ್ರಸಿದ್ಧ ಗ್ರಂಥಗಳನ್ನು ಅವರು ಬರೆದಿದ್ದಾರೆ. ಅವರ ಗ್ರಂಥಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ನಿರಂತರ ವಿಶ್ವಸಂಚಾರ ನಡೆಸಿದ ಹಾಫ್ಮೆನ್ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ದಕ್ಷಿಣ ಕೇರಳ ಸಮ್ಮೇಳನಕ್ಕಾಗಿ ಕೇರಳಕ್ಕೂ ಬಂದಿದ್ದರು.
ಮೆರಿಟ್ ಆಫ್ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ದುಬೈ ಹೋಲಿ ಕುರ್ಆನ್ ಆವಾರ್ಡ್ ಮೊದಲಾದ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಜರ್ಮನಿಯ ಮುಸ್ಲಿಂ ಒಕ್ಕೂಟವಾದ ಸೆಂಟ್ರಲ್ ಕೌನ್ಸಿಲ್ ಆಫ್ ಮುಸ್ಲಿಮೀಸ್ ಇನ್ ಜರ್ಮನಿಯ ಗೌರವ ಸದಸ್ಯ ಮತ್ತು ಸಲಹೆಗಾರರಾಗಿದ್ದರು.
ಆಫ್ರಿಕ ಮತ್ತು ಯುರೋಪಿನ ಮನಸ್ಸನಲ್ಲಿ ಪ್ರಭಾವ ಬೀರಿದ ರಾಜತಾಂತ್ರಿಕನಿಗೆ ದೊಡ್ಡ ಹುದ್ದೆ ಬೇಡವೆಂದು ಧರ್ಮಗಳ ನಡುವೆ ಸೇತುವೆ ಕಟ್ಟಲು ನಿರ್ಧರಿಸಿದರು. ವಿಶ್ವದಾದ್ಯಂತ ಇದೇ ಉದ್ದೇಶದಿಂದ ಪರ್ಯಟನೆ ನಡೆಸಿದರು. ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ವೇಳೆ ಆಫ್ರಿಕದಲ್ಲಿ ಜರ್ಮನಿಯನ್ನು ಪ್ರತಿನಿಧಿಸಿದ ಉನ್ನತ ನ್ಯಾಟೋ ಅಧಿಕಾರಿಯಾಗಿದ್ದರೂ ಅದನ್ನೆಲ್ಲ ಬಿಟ್ಟು 1980ರಲ್ಲಿ ಇಸ್ಲಾಮ್ ಸ್ವೀಕರಿಸಿದರು. ನಂತರವೂ ಒಂದು ದಶಕಗಳ ಕಾಲ ಜರ್ಮನಿ ವಿದೇಶ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. 1994ರಲ್ಲಿ ರಾಜತಂತ್ರಜ್ಞ ಜೀವನಕ್ಕೆ ತೆರೆ ಎಳೆದು ಧರ್ಮಪ್ರಚಾರಕನಾದರು.
1931ರಲ್ಲಿ ಜರ್ಮನ್ ನಗರವಾದ ಆಶ್ಪನ್ಬರ್ಗ್ ನಲ್ಲಿ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದ್ದ ಅವರ ಮತಾ೦ತರ ಯುರೋಪಿನಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು 1983 ರಿಂದ 1987ರವರೆಗೆ ನ್ಯಾಟೊ ಇನ್ಫಾರ್ಮೆಶನ್ ಹುದ್ದೆಯಲ್ಲಿದ್ದರು. 1987ರಲ್ಲಿ ಅಲ್ಜೀರಿಯಕ್ಕೆ ಜರ್ಮನಿಯ ರಾಯಭಾರಿಯಾದರು. ಹೀಗೆ ವಿದೇಶದಲ್ಲಿ ಜರ್ಮನಿಯನ್ನು ಪ್ರತಿನಿಧಿಸಿದ ಮೊದಲ ಮುಸ್ಲಿಂ ಎನಿಸಿಕೊಂಡರು. ವಿರೋಧ ಲೆಕ್ಕಿಸದೆ ಆಫ್ರಿಕದಲ್ಲಿ ಜರ್ಮನಿ ವಕ್ತಾರನಾಗಿ ಮುಂದುವರಿದ ಅವರು 1990-94ರಲ್ಲಿ ಮೊರೊಕ್ಕೊ ರಾಯಭಾರಿಯಾದರು. ಪಾಶ್ಚಾತ್ಯರಿಗೆ ಇಸ್ಲಾಮನ್ನು ಪರಿಚಯಿಸಲು ಮತ್ತು ಮುಸ್ಲಿಮರಿಗೆ ಪಾಶ್ಚಾತ್ಯರನ್ನು ಪರಿಚಯಿಸುವ ಕೆಲಸವನ್ನು ಹೋಪ್ ಮೆನ್ ಮಾಡಿದರು. ಫ್ರೆಂಚ್ ಕಾಲನಿಯಾದ ಅಲ್ಜೀರಿಯದಲ್ಲಿ 1960ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವೇಳೆ ಅಲ್ಲಿ ಕಂಡ ದೃಶ್ಯಗಳು ಅವರನ್ನು ಇಸ್ಲಾಮಿನೆಡೆಗೆ ಆಕರ್ಷಿಸಿತ್ತು. ವಸಾಹತು ಶಾಹಿಗಳ ಕ್ರೂರ ದೌರ್ಜನ್ಯಯ ವೇಳೆ ದೃಢವಾಗಿ ನಿಂತ ಅಲ್ಜೀರಿಯನ್ನರ ಸಹನೆ ತನಗೆ ಸರಿಯಾದ ಇಸ್ಲಾಂನ್ನು ತಿಳಿಸಿಕೊಟ್ಟಿತು ಎಂದು ಅವರು ಹೇಳಿದರು ಮತ್ತು ಬರೆದರು. ಇಸ್ಲಾಮಿನ ಒಳಿತನ್ನು ಆದೇಶದಲ್ಲಿ ನೋಡಿದೆ ಎಂದು ಅವರು ಹೇಳುತ್ತಿದ್ದರು. ವಿಲ್ಫ್ರೆಡ್ ಹೋಫ್ಮೆನ್ ಮತಾಂತರಗೊಂಡ ಬಳಿಕ ಮುರಾದ್ ಎಂದು ಹೆಸರಿಗೆ ಸೇರಿಸಿಕೊಂಡರು. ಪವಿತ್ರ ಕುರ್ಆನ್ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದರು. ಅದರ ಭಾವನಾತ್ಮಕ ನೆಲೆಯಲ್ಲಿ ಅವರು ಜರ್ನಿ ಟು ಮಕ್ಕ ಕೃತಿ ರಚಿಸಿದರು.
ಎಂದೂ ಅವರಲ್ಲಿ ತೀವ್ರ ವಿಚಾರ ಉದಿಸಿಲ್ಲ. ಇಸ್ಲಾಮನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದನ್ನು ಇತರರಿಗೆ ತಿಳಿಸಲು ನಿರಂತರ ಯತ್ನಿಸಿದರು. ಹೀಗೆ ಹಲವು ದೇಶಗಳನ್ನು ಸುತ್ತಾಡಿದರು. ಮೌನವಾಗಿ ತನ್ನ ಸೇವೆಯನ್ನು ನಡೆಸಿದರು. ಇದಕ್ಕೆ ದುಬೈ ಸರಕಾರ 2009ರಲ್ಲಿ ಹೋಲಿ ಕುರ್ಆನ್ ಅವಾರ್ಡ್ ನೀಡಿ ಗೌರವಿಸಿತು. 2000ರಲ್ಲಿ ನಡೆದ ಎಸ್ಐಒ ದಕ್ಷಿಣ ಕೇರಳ ಸಮ್ಮೇಳನಕ್ಕೆ ಅವರು ಆಗಮಿಸಿದ್ದರು. 1987ರಲ್ಲಿ ಅವರು ಬರೆದ ಜರ್ಮನಿ ಮುಸ್ಲಿಮನ ಒಂದು ದಿನ ಎಂಬ ಕೃತಿಯು ಬೆಂಬಲ ಮತ್ತು ವಿರೋಧ ಎರಡನ್ನೂ ಪಡೆದುಕೊಂಡ ಕೃತಿಯಾಗಿದೆ.












