ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 17: ಪೌರತ್ವ ತಿದ್ದುಪಡಿ ಕಾನೂನು ಕುರಿತ ನಿಲುವನ್ನು ಪುನರಾವರ್ತಿಸಿದ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಕೇರಳ ಸರಕಾರ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅನುಮತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಹೋಗಿದ್ದರಲ್ಲಿ ತಪ್ಪಿಲ್ಲ ಎಂದು ಆರಿಫ್ ಖಾನ್ ಪತ್ರಕರ್ತರಿಗೆ ತಿಳಿಸಿದರು. ಆದರೆ ಈ ವಿಷಯವನ್ನು ತನಗೆ ತಿಳಿಸಬೇಕಾಗಿತ್ತು ಅವರು ಹೇಳಿದರು. ಸಂವಿಧಾನ ಪ್ರಕಾರ ರಾಜ್ಯದ ಮುಖ್ಯಸ್ಥ ತಾನಾಗಿರುವೆ. ಮೂಲಭೂತ ಪ್ರೊಟೊಕಾಲ್ ಪಾಲಿಸಿಲ್ಲ. ಸಂವಿಧಾನ ಸಿಂಧುತ್ವವನ್ನು ಪ್ರಶ್ನಿಸಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು.












