ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಜ.18:ಇರಾನ್ ಆಧ್ಯಾತ್ಮಿಕ ನಾಯಕ ಆಯತ್ತುಲ್ಲ ಅಲಿ ಖಾಮ್‍ನಾಯ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಾಪ್ರಹಾರ ಮಾಡಿದ್ದು ಖಾಮ್‍ನಾಯ್ ಎಚ್ಚರದಿಂದ ಮಾತಾಡಬೇಕೆಂದು ಹೇಳಿದರು. ಇರಾನಿನ ಆಧ್ಯಾತ್ಮಿಕ ನಾಯಕರು ಅಮೆರಿಕ ಮತ್ತು ಯುರೋಪಿನ ಕುರಿತು ಕೆಲವು ಕೆಟ್ಟ ಮಾತು ಹೇಳಿದ್ದಾರೆ. ಇರಾನಿನ ಅರ್ಥವ್ಯವಸ್ಥೆ ಪತನದಂಚಿನಲ್ಲಿದೆ. ಜನರು ಕಷ್ಟಪಡುತ್ತಿದ್ದಾರೆ. ಅವರ ಮಾತುಗಳನ್ನು ಎಚ್ಚರದಿಂದ ಬಳಸಬೇಕು ಎಂದು ಟ್ರಂಪ್ ಟ್ವೀಟ್ ಮಾಡಿದರು. ಶುಕ್ರವಾರ ಅಮೆರಿಕದ ವಿರುದ್ಧ ಕಟು ಟೀಕೆಯನ್ನು ಖಾಮ್‍ನಾಯ್ ಮಾಡಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೋಕರ್, ಇರಾನಿನ ಜನತೆಯನ್ನು ವಂಚಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದರು. ಇರಾಕಿನ ಅಮೆರಿಕದ ಕೇಂದ್ರಗಳಿಗೆ ಇರಾನ್ ನಡೆಸಿದ ದಾಳಿಯು ಅಮೆರಿಕದ ಸೇನೆಯ ಕಪಾಲ ಮೋಕ್ಷವಾಗಿದೆ. 2012 ನಂತರ ಮೊದಲ ಬಾರಿ ಜುಮುಃ ನಮಾಝ್‍ಗೆ ನೇತೃತ್ವ ನೀಡಿದ ವೇಳೆ ಖಾಮ್‍ನಾಯ್ ಹೀಗೆ ಹೇಳಿದರು.












