ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 18: ವಿಡಿ ಸಾವರ್ಕರ್ ರನ್ನು ಟೀಕಿಸುವವರು ಎರಡು ದಿವಸವಾದರೂ ಅಂಡಮಾನ್ ಸೆಲ್ಯೂಲರ್ ಜೈಲಿನಲ್ಲಿ ಮಲಗಲು ಸಿದ್ಧರಾಗಬೇಕೆಂದು ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿದರು. ಸಾವರ್ಕರ್ ರಿಗೆ ಭಾರತ ರತ್ನ ನೀಡುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಹದಿನಾಲ್ಕು ವರ್ಷ ಬ್ರಿಟಿಷರ ದೌರ್ಜನ್ಯ ಸಹಿಸಿ ಸಾವರ್ಕರ್ ಸೆಲ್ಯೂಲರ್ ಜೈಲಿನಲ್ಲಿದ್ದರು. ಅವರ ವಿರೋಧಿಗಳು ಎರಡು ದಿವಸವಾದರೂ ಸೆಲ್ಯೂಲರ್ ಜೈಲಿನಲ್ಲಿ ಮಲಗಲು ತಯಾರಾಗಲಿ ಎಂದು ರಾವುತ್ ಹೇಳಿದರು.
ರೇಪ್ ಇನ್ ಇಂಡಿಯ ಹೇಳಿಕೆಯಲ್ಲಿ ರಾಹುಲ್ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಸದಸ್ಯರು ಪಾರ್ಲಿಮೆಂಟಿನಲ್ಲಿ ಬಲವಾಗಿ ಆಗ್ರಹಿಸಿದ್ದರು. ಇದಕ್ಕೆ ತಾನು ರಾಹುಲ್ ಗಾಂಧಿ ರಾಹುಲ್ ಸಾವರ್ಕರ್ ಅಲ್ಲ ಎಂದು ಅವರು ಹೇಳಿದ್ದರು. ಬ್ರಿಟಿಷರಿಗೆ ಕ್ಷಮೆಯಾಚಿಸಿ ಪತ್ರ ಬರೆದು ಸಾವರ್ಕರ್ ಜೈಲಿನಿಂದ ಬಿಡುಗಡೆಯಾಗಿದ್ದನ್ನು ರಾಹುಲ್ ಸೂಚಿಸಿದ್ದರು. ಇದು ಶಿವಸೇನೆ ,ಕಾಂಗ್ರೆಸ್ ಭಿನ್ನಮತಕ್ಕೆ ಕಾರಣವಾಗಿತ್ತು. ರಾಹುಲ್ ಹೇಳಿಕೆಗೆ ಉತ್ತರವಾಗಿ ರಾವುತ್ ಹೊಸ ಹೇಳಿಕೆ ನೀಡಿದ್ದಾರೆ. ಇದೇವೇಳೆ ಕಳೆದು ಹೋದುದನ್ನು ಕುರಿತು ಈಗ ಹೇಳಬೇಕಾಗಿಲ್ಲ. ಮಹಾರಾಷ್ಟ್ರದ ಜನರ ಅಭಿವೃದ್ಧಿ ಸಖ್ಯ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಿವಸೇನೆ ನಾಯಕ ಆದಿತ್ಯ ಠಾಕರೆ ಹೇಳಿದರು. ಬೇರೆ ಬೇರೆ ಆಶಯದ ಪಾರ್ಟಿಗಳು ಮಹಾರಾಷ್ಟ್ರದಲ್ಲಿ ಒಂದುಗೂಡಿದ್ದು ಜನರ ಕಲ್ಯಾಣಕ್ಕಾಗಿದೆ ಎಂದು ಆದಿತ್ಯ ಠಾಕರೆ ನೆನಪಿಸಿದರು.












