ಪೆರಿಯಾರ್ ಕುರಿತು ಹೇಳುವ ಮೊದಲು ರಜನೀಕಾಂತ್ ಆಲೋಚಿಸಬೇಕು- ಎಂಕೆ ಸ್ಟಾಲಿನ್

0
592

ಸನ್ಮಾರ್ಗ ವಾರ್ತೆ

ಚೆನ್ನೈ, ಜ. 22: ಸಮಾಜ ಸುಧಾರಕ ಪೆರಿಯಾರ್ ಇವಿ ರಾಮಸ್ವಾಮಿಯ ಕುರಿತು ನಟ, ರಾಜಕಾರಣಿ ರಜನೀಕಾಂತ್ ಹೇಳಿಕೆ ನೀಡುವುದರ ಮೊದಲು ಆಲೋಚಿಸಬೇಕೆಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಹೇಳಿದ್ದಾರೆ. ಪೆರಿಯಾರ್ ಅವರಂಥವರ ಕುರಿತು ಏನಾದರೂ ಹೇಳುವ ಮೊದಲು ರಜನೀಕಾಂತ್ ಆಲೋಚಿಸಲಿ. ನನ್ನ ಗೆಳೆಯ ರಜನೀಕಾಂತ್ ರಾಜಕಾರಣಿಯಲ್ಲ. ಅವರು ಒಬ್ಬ ನಟ. ಪೆರಿಯಾರ್ ರಂತಹವರ ಕುರಿತು ಆಲೋಚಿಸಿ ಮಾತಾಡಲಿ ಎಂದು ಸ್ಟಾಲಿನ್ ಹೇಳಿದರು.

ಜನವರಿ 14ರಂದು ತುಗ್ಲಕ್ ಮಾಸಪತ್ರಿಕೆಯ 50ನೆ ವರ್ಷ ಆಚರಣೆಯ ಕಾರ್ಯಕ್ರಮದಲ್ಲಿ ರಜನೀಕಾಂತ್ ಮಾತಾಡಿ ಸೇಲಂನಲ್ಲಿ ಪೆರಿಯಾರ್ ಶ್ರೀರಾಮ ಮತ್ತು ಸೀತೆಯ ನಗ್ನ ಚಿತ್ರಗಳೊಂದಿಗೆ ಮೆರವಣಿಗೆ ಮಾಡಿದ್ದರು ಎಂದು ಹೇಳಿದ್ದರು. ಅಂಧವಿಶ್ವಾಸಗಳ ವಿರುದ್ಧ ಹೋರಾಟದ ಭಾಗವಾಗಿ ಪೆರಿಯಾರ್ ರ್ಯಾಲಿ ನಡೆಸಿದ್ದೆಂದು ರಜನೀ ಸ್ಪಷ್ಟಪಡಿಸಿದ್ದರು.