ಸನ್ಮಾರ್ಗ ವಾರ್ತೆ
ಮಂಗಳೂರು: ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ)ದ 2020ನೇ ಅವಧಿಗೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಅಶೀರುದ್ದೀನ್ ಮಂಜನಾಡಿ ಆಯ್ಕೆಯಾಗಿದ್ದಾರೆ. ಉಡುಪಿಯ ಹೂಡೆಯಲ್ಲಿರುವ ಸಾಲಿಹಾತ್ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ ಎಸ್ ಐ ಓ ಸದಸ್ಯರ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅಶೀರುದ್ದೀನ್ ರವರನ್ನು ಆಯ್ಕೆ ಮಾಡಲಾಯಿತು.
ಕಾಸರಗೋಡಿನ ಆಲಿಯಾ ಇಂಟರ್ ನ್ಯಾಷನಲ್ ಅರೇಬಿಕ್ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು, ಸದ್ಯ ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಗಳಿಸುತ್ತಿದ್ದಾರೆ. ಮೇಲ್ತೆನೆ ಬ್ಯಾರಿ ಸಂಘದಲ್ಲಿ ಗುರುತಿಸಿಕೊಂಡಿರುವ ಇವರು, ಇಂಕ್ ಡಬ್ಬಿ ಡಾಟ್. ಕಾಂ ವೆಬ್ ಸೈಟ್ ನ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅಶೀರನ ಕವನಗಳು ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಇವರು, ಇತ್ತೀಚೆಗೆ ಹೈದರಾಬಾದ್ ನ ಉಸ್ಮಾನಿಯಾ ವಿವಿಯಲ್ಲಿ ನಡೆದ ಸೌತ್ ಇಂಡಿಯಾ ಹಿಸ್ಟರಿ ಕಾನ್ಫರೆನ್ಸ್ ನಲ್ಲಿ ತುಳುನಾಡಿನ ವೀರವನಿತೆ ರಾಣಿ ಅಬ್ಬಕ್ಕ ರ ಕುರಿತು ಸಂಶೋಧನಾ ಪ್ರಬಂಧವನ್ನೂ ಮಂಡಿಸಿದ್ದಾರೆ.












