ಸನ್ಮಾರ್ಗ ವಾರ್ತೆ
ಕುವೈಟ್ ಸಿಟಿ, ಜ. 23: ದೇಶದ ಹನ್ನೊಂದು ಸಾವಿರ ವಿದೇಶಿ ಇಂಜಿನಿಯರ್ ಗಳ ಸರ್ಟಿಫಿಕೆಟ್ಗಳನ್ನು ತಿರಸ್ಕರಿಸಲಾಗಿದೆ ಎಂದು ಕುವೈಟ್ ಇಂಜಿನಿಯರ್ಸ್ ಸೊಸೈಟಿ ನಿರ್ದೇಶಕ, ಬೋರ್ಡ್ ಅಧ್ಯಕ್ಷ ಫಝಲ್ ಅಲ್ ಅತ್ತಾಲ್ ಹೇಳಿದರು. ಇಂಜಿನಿಯರ್ ರ ಇಖಾಮ ನವೀಕರಣಕ್ಕೆ ಕುವೈಟ್ ಸೊಸೈಟಿ ಆಫ್ ಇಂಜಿನಿಯರ್ಸ್ ಎನ್ ಒಸಿ ಕಡ್ಡಾಯವಾದ್ದರಿಂದ ಇಂಜಿನಿಯರಿಂಗ್ ಕೆಲಸ ಮಾಡುವ ವಿದೇಶಿಗಳ ಅರ್ಹತಾ ಸರ್ಟಿಫಿಕೆಟ್ಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡತೊಡಗಿದ್ದರು. 2018ರ ಮಾರ್ಚ್ ನಿಂದ 1100 ಇಂಜಿನಿಯರ್ಸ್ ಅಂಗೀಕಾರ ಕಳೆದುಕೊಂಡಿದ್ದಾರೆ. ಭಾರತ ಸಹಿ ಏಷ್ಯದ ದೇಶಗಳಿಂದ ಬಂದವರ ಸರ್ಟಿಫಿಕೆಟ್ ತಿರಸ್ಕೃತಗೊಂಡಿದ್ದು ತೃಶಂಕು ಸ್ಥಿತಿ ನಿರ್ಮಾಣವಾಗಿದೆ.
ಕುವೈಟ್ ಸರಕಾರದ ಅಕ್ರಡಿಟೇಶನ್ ಇರುವ ಸಂಸ್ಥೆಗಳಲ್ಲಿ ಕಲಿತವರಿಗೆ ಮಾತ್ರ ಎನ್ಒಸಿ ನೀಡಲಾಗುವುದು ಎಂದು ಸೊಸೈಟಿ ಹೇಳುತ್ತಿದೆ. ಭಾರತದಲ್ಲಿ ಎನ್ಬಿಎ ಅಕ್ರಡಿಟೇಶನ್ ಸಂಸ್ಥೆಗಳಿಗೆ ಮಾತ್ರ ಕುವೈಟ್ ಅಂಗೀಕರಿಸುತ್ತದೆ. ಎನ್ಬಿಎ ಅಕ್ರಡಿಟೇಶನ್ ಇಲ್ಲದ ಕಾಲೇಜುಗಳಲ್ಲಿ ಕಲಿತವರಿಗೆ ಎನ್ಒಸಿ ನಿಷೇಧಿಸಲಾಗುತ್ತಿದೆ. ಇಂಜಿನಿಯರಿಂಗ್ ಅಲ್ಲದ ಬೇರೆ ವಿಭಾಗಕ್ಕೆ ಕೆಲಸಕ್ಕೆ ಸೇರುವುದು ಅಥವಾ ಸ್ವದೇಶಕ್ಕೆ ಮರಳುವುದು ಮಾತ್ರ ಅಂಗೀಕಾರ ಕಳಕೊಂಡ ಇಂಜಿನಿಯರ್ ಗಳಿರುವ ಏಕೈಕ ಅವಕಾಶವಾಗಿದೆ. ಇಂಜಿನಿಯರಿಂಗ್ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾದವರೂ ಅಂಗೀಕಾರ ಕಳೆದುಕೊಂಡಿದ್ದಾರೆ.












