ಸನ್ಮಾರ್ಗ ವಾರ್ತೆ
ಮುಂಬೈ, ಜ. 23: ಮಹಾರಾಷ್ಟ್ರ ರಾಜಕೀಯದಲ್ಲಿ ಬದಲಾವಣೆಗೆ ಮಹಾರಾಷ್ಟ್ರ ನವನಿರ್ಮಾಣ್ ಸೇನೆ ಹೊರಟಿದ್ದು ಧ್ವಜದಲ್ಲಿ ಬದಲಾವಣೆಯನ್ನು ಅದು ಮಾಡಲಿದೆ ಎಂದು ವರದಿಯಾಗಿದೆ. ಹಿಂದುತ್ವ ಸಿದ್ಧಾ೦ತಕ್ಕೆ ಹೆಚ್ಚು ನಿಕಟವಾಗುವುದು ರಾಜ್ ಠಾಕ್ರೆಯ ಎಂಎನ್ಎಸ್ನ ಲೆಕ್ಕಾಚಾರವಾಗಿದೆ ಎನ್ನಲಾಗಿದ್ದು ಕೇಸರಿ ಬಣ್ಣದ ಮೇಲೆ ಯಾರಿಗೂ ಕಾಪಿರೈಟಿಲ್ಲ ಎಂದು ನವನಿರ್ಮಾಣ ಸೇನೆ ನಾಯಕ ಸಂದೀಪ್ ದೇಶ್ಪಾಂಡೆ ಹೇಳಿದರು. ಇದು ಎಂಎನ್ಎಸ್ನ ಬದಲಾವಣೆಯನ್ನು ಸೂಚಿಸುತ್ತಿದೆ. ಗುರುವಾರ ಇದಕ್ಕೆ ಸಂಬಂಧಿಸಿದ ಹೆಚ್ಚಿನ ಘೋಷಣೆಗಳು ನಡೆಯಲಿವೆ.
ಶಿವಸೇನೆಯ ವಿಭಜನೆಯ ನಂತರ 2006ರಲ್ಲಿ ರಾಜ್ ಠಾಕರೆ ಎಂಎನ್ಎಸ್ ಸ್ಥಾಪಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಸ್ ಪ್ರದರ್ಶನ ಚೆನ್ನಾಗಿರಲಿಲ್ಲ. ಶಿವಸೇನೆ, ಕಾಂಗ್ರೆಸ್, ಎನ್ಸಿ ಜೊತೆ ಸೇರಿ ಜಾತ್ಯತೀತ ರಾಷ್ಟ್ರದತ್ತ ಹೆಚ್ಚು ನಿಕಟವಾಗುವಾಗ ಬಿಜೆಪಿಯ ಜೊತೆ ಸೇರಿ ಎಂಎನ್ಎಸ್ ಹಿಂದುತ್ವ ರಾಷ್ಟ್ರವಾದಕ್ಕೆ ನಿಕಟಗೊಳ್ಳಲು ಬಯಸಿದೆ.












