ಪುರುಷರೆಲ್ಲಿ?: ಶಾಹಿನ್‍ಬಾಗ್ ಪ್ರತಿಭಟನೆಯನ್ನು ಟೀಕಿಸಿದ ಯೋಗಿ

0
1255

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 23: ಪೌರತ್ವ ಕಾನೂನು ವಿರುದ್ಧ ಮಹಿಳೆಯರ ಶಾಹಿನ್‍ಬಾಗ್ ಪ್ರತಿಭಟನೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದು, ಮಹಿಳೆಯರು ಮಕ್ಕಳನ್ನು ಚಳಿಯಲ್ಲಿ ಪ್ರತಿಭಟನೆಗೆ ಕಳುಹಿಸಿ ಪುರುಷರು ಮನೆಯಲ್ಲಿ ಸುಖವಾಗಿ ನಿದ್ರಿಸುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ವ್ಯಂಗ್ಯವಾಗಿ ಟೀಕಿಸಿದ್ದಾರೆ. ಪ್ರತಿಭಟನೆಗಿಳಿಯುವ ಧೈರ್ಯವು ಅವರಲ್ಲಿಲ್ಲ ಎಂದು ಆದಿತ್ಯನಾಥ್ ಹೇಳಿದರು. ಇದೊಂದು ದೊಡ್ಡ ಅಪರಾಧ. ಪುರುಷರು ಮನೆಯಲ್ಲಿ ಕೂತು ಮಹಿಳೆಯರು ಚಳಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಇದು ಅಪಮಾನವಾಗಿದ್ದು ಸಾರ್ವಜನಿಕ ಆಸ್ತಿ ನಾಶಪಡಿಸಿದರೆ ಅಂತಹವರ ಆಸ್ತಿಯನ್ನು ಮುಟ್ಟುಗೊಲು ಹಾಕಲಾಗುವುದು ಎಂದು ಪುರುಷರಿಗೆ ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್ ಸಮಾಜವಾದಿ ಪಾರ್ಟಿ ಎಡಪಕ್ಷಗಳು ಮಹಿಳೆಯರನ್ನು ಪ್ರತಿಭಟನೆಗೆ ಪ್ರೇರೇಪಿಸುತ್ತಿವೆ ಎಂದವರು ಹೇಳಿದ್ದಾರೆ.

ನಲ್ವತ್ತು ದಿವಸಗಳಿಂದ ಶಾಹಿನ್ ಬಾಗ್‍ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಿರ್ಮೂಲಿಸಲು ಉತ್ತರಪ್ರದೇಶ ಪೊಲೀಸರು ಮಾಡಿದ ಯತ್ನಗಳೆಲ್ಲವೂ ವಿಫಲವಾಗಿತ್ತು. ಇತ್ತೀಚೆಗೆ ಪ್ರತಿಭಟನಾಕಾರರ ಹೊದಿಕೆಗಳನ್ನು ಉತ್ತರ ಪ್ರದೇಶ ಪೊಲೀಸರು ಎತ್ತಿಕೊಂಡು ಹೋಗಿದ್ದರು. ಇದು ವಿವಾದವಾಗಿತ್ತು.