ಕೇಂದ್ರಕ್ಕೆ ನಾಲ್ಕು ವಾರಗಳ ಸಮಯ ನೀಡಿದ್ದು ಆತಂಕಕಾರಿ- ಜಮಾಅತೆ ಇಸ್ಲಾಮಿ ಕೇರಳ ಅಧ್ಯಕ್ಷ ಅಬ್ದುಲ್ ಅಝೀಝ್

0
852

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಜ. 23: ಕೇಂದ್ರ ಸರಕಾರಕ್ಕೆ ಅಫಿದಾವಿತ್ ಸಲ್ಲಿಸಲು ಸುಪ್ರೀಂ ಕೋರ್ಟು ನಾಲ್ಕುವಾರ ಸಮಯ ಕೊಟ್ಟಿದ್ದು, ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾನೂನು ಕುರಿತ ತೀರ್ಪು ಮುಂದೂಡಿದ್ದು, ಈ ಪರಿಸ್ಥಿತಿಯಲ್ಲಿ ಹೋರಾಟವನ್ನು ಬಲಪಡಿಸುವ ಅಗತ್ಯವಿದೆ ಎಂದು ಕೇರಳ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಎಂ ಐ ಅಬ್ದುಲ್ ಅಝೀಝ್ ಹೇಳಿದ್ದಾರೆ. ಕಾನೂನು ಪಾಸು ಮಾಡಿದಂದಿನಿಂದ ದೇಶದಲ್ಲಿ ಜನರೆಲ್ಲ ಶಾಂತ ಮತ್ತು ಕಾನೂನು ಪ್ರಕಾರ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಪೌರತ್ವ ಹಕ್ಕುಗಳು ಸಂವಿಧಾನ ಮೌಲ್ಯಗಳು ಎತ್ತಿಹಿಡಿಯಲು ಕೋರ್ಟಿನಿಂದ ಸಾಧ್ಯವಿದೆ. ಪ್ರಧಾನ ವಿಷಯಗಳಲ್ಲಿ ಒಂದೇ ರೀತಿಯ ಅನುಭವಗಳು ಮುಂದುವರಿದರೆ ಜನರಿಗೆ ಕೋರ್ಟಿನಲ್ಲಿ ವಿಶ್ವಾಸ ಪ್ರತಿಕೂಲವಾಗಬಹುದು.

ಸಂಘಪರಿವಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಿಯಮ ರೂಪಿಸುವ ಮೊದಲೇ ಕಾನೂನು ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅಫಿದಾವಿತ್ ನೀಡುವುದಕ್ಕೆ ಕೇಂದ್ರ ಸರಕಾರಕ್ಕೆ ನಾಲ್ಕು ವಾರ ಸಮಯ ನೀಡಿದ್ದು ಆತಂಕ ಸೃಷ್ಟಿಸುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.