ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 27: ಭಾರೀ ಆರ್ಥಿಕ ಬಿಕ್ಕಟ್ಟನ್ನೆದುರಿಸುತ್ತಿರುವ ಏರ್ ಇಂಡಿಯದ ಶೇ. 100 ಶೇರುಗಳನ್ನು ಮಾರಲು ಕೇಂದ್ರ ಸರಕಾರ ಹೊರಟಿದೆ. ಏರ್ ಇಂಡಿಯಕ್ಕೆ ಈಗ 58,000 ಕೋಟಿ ರೂಪಾಯಿ ಸಾಲ ಬಾಧ್ಯತೆ ಇದೆ. ಸಾಲದಲ್ಲಿ ಸರ್ವಿಸ್ ಮುಂದುವರಿಸಲಾಗುತ್ತಿರುವುದರಿಂದ ಕಂಪೆನಿಯನ್ನು ಖಾಸಗೀಕರಣ ಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಏರ್ ಇಂಡಿಯದ ಆಂತರಿಕ- ವಿದೇಶಿ ಹಾರಾಟ ಸಹಿತ ಸಂಪೂರ್ಣ ಕಂಪೆನಿ ಮಾರುವುದು ಕೇಂದ್ರ ಸರಕಾರದ ಉದ್ದೇಶ. ಶೇರು ಮಾರಾಟ ಕುರಿತು ಏರ್ ಇಂಡಿಯ ಆಸಕ್ತರನ್ನು ಆಹ್ವಾನಿಸಿದೆ. 2020 ಮಾರ್ಚ್ ಹದಿನೇಳವರೆಗೆ ಆಸಕ್ತರು ಅರ್ಜಿ ಹಾಕಿಕೊಳ್ಳಬಹುದು. ಕಂಪೆನಿ 3. 26 ಬಿಲಿಯನ್ ಡಾಲರ್ ಸಾಲ (ಸುಮಾರು 23,000 ಕೋಟಿ ರೂಪಾಯಿ), ಇತರ ಹೊಣೆಗಳನ್ನೆಲ್ಲ ಶೇರು ಖರೀದಿಸುವವರು ವಹಿಸಿಕೊಳ್ಳಬೇಕಾಗಿದೆ. 2018ರಲ್ಲಿ ಶೇ. 76ರಷ್ಟು ಶೇರು ಮಾರಾಟಕ್ಕೆ ಕೇಂದ್ರ ಸರಕಾರ ಯತ್ನಿಸಿ ನೋಡಿತು. ಯಾರೂ ಆಸಕ್ತಿ ವಹಿಸಲಿಲ್ಲ. ಈ ಬಾರಿ ಯಾರೂ ಖರೀದಿಗೆ ಮುಂದೆ ಬರದಿದ್ದರೆ ಕಂಪೆನಿ ಮುಚ್ಚಲಾಗುವುದು ಎಂದು ಸರಕಾರ ಮುನ್ನೆಚ್ಚರಿಕೆ ನೀಡಿದೆ. ವಿದೇಶಿ ಕಂಪೆನಿಗಳೂ ಏರ್ ಇಂಡಿಯ ಶೇರು ಖರೀದಿಸದಂತೆ ನಿಯಂತ್ರಣವಿದೆ.
ಭಾರತದ ಪಾಲುದಾರರೊಂದಿಗೆ ಸೇರಿ ಮಾತ್ರ ಖರೀದಿಸಬಹುದು. ಏರ್ ಇಂಡಿಯದ ನಿರ್ಣಾಯಕ ಶೇರುಗಳು ಭಾರತದ ಕಂಪೆನಿಯೊಂದಿರಬೇಕೆಂದು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಏರ್ ಇಂಡಿಯ 69,575.64 ಕೋಟಿ ರೂ. ನಷ್ಟದಲ್ಲಿದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.












