ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 27: ಕೇಂದ್ರ ಸರಕಾರ 2020 ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದ್ದು ಪಾಕಿಸ್ತಾನ ಮೂಲದ ಅದ್ನಾನ್ ಸಮಿಯೂ ಪದ್ಮಶ್ರೀಗೆ ಭಾಜನರಾಗಿದ್ದಾರೆ. ಆದರೆ ರಾಜ್ ಠಾಕರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನೆ ಅದ್ನಾನ್ ಸಮಿಯ ಪದ್ಮಶ್ರೀಯನ್ನು ವಿರೋಧಿಸಿದೆ. ಅದ್ನಾಸ್ ಸಮಿ ಮೂಲತಃ ಭಾರತೀಯ ಪ್ರಜೆಯಲ್ಲ. ಆದ್ದರಿಂದ ಅವರಿಗೆ ಪ್ರಶಸ್ತಿ ಕೊಡಬಾರದು. ಆದರೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅದ್ನಾನ್ ಸಮಿಗೆ ಪದ್ಮಶ್ರೀ ಕೊಟ್ಟದ್ದರಲ್ಲಿ ಸಂತೋಷವಿದೆ ಎಂದಿದ್ದಾರೆ. ಅವರೇ ಅದ್ನಾನ್ ಸಮಿಗೆ ಪೌರತ್ವ ಕೊಡಲು ಶಿಫಾರಸು ಮಾಡಿದ್ದರು.
ಅದ್ನಾನ್ರನ್ನು ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಪಡಿಸಲಾಗಿತ್ತು. ಅದ್ನಾನ್ ಸಮಿ ಲಂಡನ್ನಲ್ಲಿ ಜನಿಸಿದ್ದು ಅವರ ತಂದೆ ಪಾಕಿಸ್ತಾನದ ವಾಯುಸೇನೆ ಪೈಲಟ್ ಆಗಿದ್ದರು. ಮೊತ್ತಮೊದಲು ಒಂದು ವರ್ಷದ ವಿಸಿಟಿಂಗ್ ವೀಸಾದಲ್ಲಿ 2001ರಲ್ಲಿ ಭಾರತಕ್ಕೆ ಬಂದಿದ್ದರು. 2015ರಲ್ಲಿ ಭಾರತದ ಪೌರತ್ವಕ್ಕೆ ಅರ್ಜಿ ಹಾಕಿದ್ದರು. ಜನವರಿ 2016ರಲ್ಲಿ ಅವರಿಗೆ ಭಾರತದ ಪೌರತ್ವ ನೀಡಲಾಗಿದೆ. ಇದರಲ್ಲಿ ಅದ್ನಾನ್ ಸಹಿತ 118 ಮಂದಿಗೆ ಅಂದು ಪೌರತ್ವ ವಿತರಿಸಲಾಗಿತ್ತು. ಶನಿವಾರ ಅದ್ನಾನ್ಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಇದನ್ನೀಗ ರಾಜ್ ಠಾಕ್ರೆಯ ಪಾರ್ಟಿ ವಿರೋಧಿಸುತ್ತಿದೆ.












