ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಜ.27: ನಿನ್ನೆ ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕಾಸರಗೋಡಿನಿಂದ ಕಳಿಯಿಕ್ಕಾವಿಳದವರೆಗೆ 620 ಕಿಲೋಮೀಟರ್ ಉದ್ದ ಮಾನವ ಮಹಾ ಸರಪಳಿಯಲ್ಲಿ ಲಕ್ಷಾಂತರ ಜನರು ಪಾಲ್ಗೊಂಡರು. 60-70 ಲಕ್ಷ ಜನರು ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಎಸ್.ರಾಮಚಂದ್ರನ್ ಪಿಳ್ಳೆ ಕಾಸರಗೋಡಿನಲ್ಲಿ ಮೊದಲ ವ್ಯಕ್ತಿಯಾಗಿ ಸಂಕಲೆ ಆರಂಭಿಸಿದರು. ಕಳಿಯಾಕ್ಕಾವಿಳದಲ್ಲಿ ಪೊಲಿಟ್ ಬ್ಯೋರೊ ಸದಸ್ಯ ಬೇಬಿ ಕೊನೆಯ ಸಂಕಲೆಯ ವ್ಯಕ್ತಿಯಾಗಿ ನಿಂತರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್, ಎಲ್ಲ್ಡಿಎಫ್ ಕನ್ವಿನರ್ ಎ. ವಿಜಯರಾಘವನ್ ಮೊದಲಾದವರು ಸಂಖಲೆಯಲ್ಲಿದ್ದರು. ಅಪಾರ ಮಹಿಳೆಯರ ಸಹಿತ ಅಪಾರ ಜನಸ್ತೋಮ ಪೌರತ್ವ ಕಾನೂನು ವಿರುದ್ಧ ಪ್ರತಿಭಟನಾರ್ಥವಾಗಿ ನಡೆದ ಸಂಖಲೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞೆ ಮಾಡಿದರು.












