ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 28: ಶಾಹೀನ್ ಬಾಗ್ ನಲ್ಲಿ ಲಕ್ಷಾಂತರ ಮಂದಿ ಸೇರಿದ್ದಾರೆ. ದೆಹಲಿಯ ಜನರು ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಅವರು ನಿಮ್ಮ ಮನೆ ಪ್ರವೇಶಿಸಬಹುದು, ನಿಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಅತ್ಯಾಚಾರಕ್ಕೆ ಒಳಪಡಿಸಬಹುದು. ಇವತ್ತೇ ನಿರ್ಧರಿಸಿ. ಮಿಡಿ ಮತ್ತು ಅಮಿತ್ ಷಾ ನಾಳೆ ನಿಮ್ಮನ್ನು ಬಚಾವ್ ಮಾಡಲಾರರು.. ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಅಲ್ಲದೆ, ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ದಿಲ್ಲಿಯ ಶಾಹಿನ್‍ಬಾಗ್ ನಲ್ಲಿ ನಡೆಯುತ್ತಿರುವ ಮಹಿಳೆಯರ ಪ್ರತಿಭಟನೆಯನ್ನು ಒಂದು ಗಂಟೆಯಲ್ಲಿ ತೆರವುಗೊಳಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ಬಿಜೆಪಿ ಸರಕಾರ ಅಧಿಕಾರ ಬರಲಿ. ಒಂದು ತಿಂಗಳೊಳಗೆ ಸರಕಾರಿ ಭೂಮಿಯಲ್ಲಿ ಇರುವ ಎಲ್ಲ ಮಸೀದಿಗಳನ್ನು ಕೆಡವಿ ಹಾಕಲಾಗುವುದು ಎಂದು ಸಂಸದ ಗುಡುಗಿದರು. ಪಶ್ಚಿಮ ದಿಲ್ಲಿಯ ವಿಕಾಸಪುರಿ ವಿಧಾನಸಭಾ ಕೇತ್ರದಲ್ಲಿ ಬಿಜೆಪಿ ಪ್ರಚಾರ ರ್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು. ಫೆಬ್ರುವರಿ ಹನ್ನೊಂದಕ್ಕೆ ದಿಲ್ಲಿಯಲ್ಲಿ ಚುನಾವಣೆ ನಡೆಯಲಿದ್ದು ಬಿಜೆಪಿ ಅಧಿಕಾರಕ್ಕ ಬಂದರೆ ಶಾಹಿನ್ ಬಗ್‍ನ ಎಲ್ ಪ್ರತಿಭಟನಾಕಾರರನ್ನು ಒಂದು ಗಂಟೆಯಲ್ಲಿ ತೆರವುಗೊಳಿಸಲಾಗುವುದು. ಒಬ್ಬನೇ ಒಬ್ಬ ಮತ್ತೆ ಅಲ್ಲಿರುವುದಿಲ್ಲ ಎಂದರು.
ಪೌರತ್ವ ತಿದ್ದುಪಡಿ ಕಾನೂನು, ಎನ್‍ಪಿಆರ್ ವಿರುದ್ಧ ಮಹಿಳೆಯರು ಶಾಹಿನ್ ಬಾಗ್‍ನಲ್ಲಿ ರಾತ್ರೆ ಹಗಲು ಪ್ರತಿಭಟನೆ ನಡೆಸುತ್ತಿದ್ದಾರೆ. 40 ದಿವಸಗಳು ಕಳೆದಿವೆ. ಆದರೂ ಪ್ರತಿಭಟನೆ ಇನ್ನಷ್ಟು ತೀವ್ರವಾಗುತ್ತಿದೆ. ಕಳೆದ ದಿವಸ ರಿತಾಲ ಕ್ಷೇತ್ರದಲ್ಲಿ ನಡೆದ ಬಿಜೆಪಿ ಪ್ರಚಾರ ರ್ಯಾಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಗುಂಡು ಹಾರಿಸಿ ಕೊಲ್ಲುವ ಮಾತನ್ನಾಡಿದ್ದರು.
#WATCH: BJP MP Parvesh Verma says, "…Lakhs of people gather there (Shaheen Bagh). People of Delhi will have to think & take a decision. They'll enter your houses, rape your sisters&daughters, kill them. There's time today, Modi ji & Amit Shah won't come to save you tomorrow…" pic.twitter.com/1G801z5ZbM
— ANI (@ANI) January 28, 2020












