ಸನ್ಮಾರ್ಗ ವಾರ್ತೆ
ಕಲ್ಲಿಕೋಟೆ, ಜ. 28: ಮುಸ್ಲಿಂ ಸಮುದಾಯ ಆತಂಕ ಪ್ರಧಾನಿಗೆ ತಿಳಿಸಿದ್ದೇನೆ. ಇತರ ಪ್ರಧಾನಿಗಳ೦ತೆ ನನಗೆ ಮೋದಿಯವರೊಂದಿಗೂ ಉತ್ತಮ ಸಂಬಂಧ ಇದೆ ಎಂದು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ. ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಪೌರತ್ವತಿದ್ದುಪಡಿ ಕಾನೂನು ಹೋರಾಟದಲ್ಲಿ ಸಮಸ್ತದ ಎರಡು ವಿಭಾಗಗಳೂ ಸಹಮತದಲ್ಲಿರಬೇಕು. ಕೇರಳದಲ್ಲಿ ಲವ್ ಜಿಹಾದ್ ಇದೆ ಎಂದು ಝಿರೊ ಮಲಬಾರ್ ಸಭೆಯ ಆರೋಪ ತಪ್ಪು. ಒಗ್ಗಟ್ಟು ಕೆಡಿಸಲು ಬಯಸುವವರು ಹಲವು ವಿಷಯಗಳನ್ನು ತರಬಹುದು. ತಪ್ಪು ಕಲ್ಪನೆಗೊಳಗಾಗಬೇಡಿ ಎಂದು ಕಾಂತಪುರಂ ಹೇಳಿದ್ದಾರೆ.












