ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 29: ಕೇಂದ್ರ ಸಚಿವ ಅನುರಾಗ ಠಾಕೂರ್, ಬಿಜೆಪಿ ನಾಯಕ ಪರ್ವೇಶ್ ವರ್ಮರನ್ನು ಮುಖ್ಯ ಚುನಾವಣಾ ಪ್ರಚಾರಕ್ ಸ್ಥಾನದಿಂದ ಬದಲಾಯಿಸಬೇಕೆಂದು ಚುನಾವಣಾ ಆಯೋಗ ಬಿಜೆಪಿ ಗೆ ಹೇಳಿದೆ. ದಿಲ್ಲಿ ವಿಧಾನಸಭಾ ಚುನಾವಣೆಯಿಂದ ಇಬ್ಬರನ್ನೂ ದೂರ ಇಡಬೇಕು. ಅತೀ ಶೀಘ್ರದಲ್ಲಿ ಅವರನ್ನು ಆ ಸ್ಥಾನದಿಂದ ತೆಗೆಯಬೇಕೆಂದು ಚುನಾವಣಾ ಆಯೋಗ ಸೂಚನೆ ನೀಡಿದೆ.
ಅನುರಾಗ್ ಠಾಕೂರ್, ಪರ್ವೇಶ್ ಶರ್ಮರನ್ನು ನಿಷೇಧಿಸಿದರೂ ಇಬ್ಬರಿಗೂ ಇನ್ನೂ ದಿಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಹುದು. ಆಯೋಗದ ಹೊಸ ಆದೇಶದಲ್ಲಿ ಇವರು ಪ್ರಚಾರ ಮಾಡಲು ವೆಚ್ಚ ಮಾಡುವ ಹಣ ಅಭ್ಯರ್ಥಿಯ ಲೆಕ್ಕಕ್ಕೆ ಬರಲಿದೆ. ಮುಖ್ಯ ಚುನಾವಣಾ ಪ್ರಚಾರಕರ ವೆಚ್ಚ ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲಾಗುವುದಿಲ್ಲ. ದೇಶದ್ರೋಹಿಗಳಿಗೆ ಗುಂಡು ಹಾಕಬೇಕೆಂದು ಬಿಜೆಪಿ ಪ್ರಚಾರ ಸಭೆಯಲ್ಲಿ ಅನುರಾಗ್ ಠಾಕೂರ್ ಮೊಳಗಿಸಿದ್ದರು. ಶಾಹೀನ್ ಬಾಗ್ ಹೋರಾಟವನ್ನು ಉದ್ದೇಶಿಸಿ ಠಾಕೂರ್ ಹೇಳಿಕೆ ನೀಡಿದ್ದರು. ಇದಕ್ಕಾಗಿ ಚುನಾವಣಾ ಆಯೋಗ ಶೋಕಾಸು ನೋಟಿಸು ಕಳುಹಿಸಿತ್ತು.












