ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 29: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೈನಾ ಮತ್ತು ಸಹೋದರಿ ಬಿಜೆಪಿ ಸೇರಿದ್ದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಸೈನಾರನ್ನು ಬಿಜೆಪಿಗೆ ಸ್ವಾಗತಿಸಿದರು. ಹರಿಯಾಣದಲ್ಲಿ ಜನಿಸಿದ 29 ವರ್ಷದ ಸೈನಾ ಮೂಲಕ ಪಾರ್ಟಿಯ ಜನಪ್ರಿಯತೆ ಹೆಚ್ಚಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ರಾಜೀವ್ ಗಾಂಧಿ ಖೇಲ್ರತ್ನ, ಅರ್ಜುನ ಅವಾರ್ಡ್ ಸಹಿತ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ.
24 ಚಾಂಪಿಯನ್ ಶಿಪ್ಗಳಲ್ಲಿ ಪ್ರಶಸ್ತಿ ಪಡೆದವರು. ಲಂಡನ್ ಒಲಿಂಪಿಕ್ನಲ್ಲಿ ಕಂಚಿನ ಪದಕ ವಿಜೇತರು. 2009ರ ವಿಶ್ವ ರ್ಯಾಂಕಿನಲ್ಲಿ ಎರಡನೆ ಸ್ಥಾನದಲ್ಲಿದ್ದರು. ಹಲವು ಬಾರಿ ಅವರು ನರೇಂದ್ರ ಮೋದಿಯನ್ನು ಪ್ರಶಂಸಿ ಟ್ವೀಟ್ ಮಾಡಿದ್ದರು.












