ಸನ್ಮಾರ್ಗ ವಾರ್ತೆ
ಕೊಡುವಳ್ಳಿ, ನ. 29: ಎನ್ಪಿಆರ್ ವಿವರ ಸಂಗ್ರಹಿಸಲು ಅಧ್ಯಾಪಕರನ್ನು ಹುಡುಕಿ ಕೊಡುವಳ್ಳಿಯ ನಗರಸಭೆಯು ಶಾಲೆಯ ಮುಖ್ಯ ಅಧ್ಯಾಪಕರಿಗೆ ಪತ್ರ ಬರೆದಿದೆ. 2021ರ ಸೆನ್ಸಸ್ ಪ್ರಕ್ರಿಯೆಗನುಗುಣವಾಗಿ ಸೆನ್ಸಸ್ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸಲು ಸೂಚಿಸಿದ ಪತ್ರದೊಂದಿಗೆ ಕೇಂದ್ರ ಗೃಹ ಸಚಿವಾಲಯದ ಆಧೀನದ ಸೆನ್ಸಸ್ ನಿರ್ದೇಶನಾಲಯದಿಂದ ದೊರೆತ ಪ್ರತಿಯನ್ನೂ ನಗಸಭಾ ಕಾರ್ಯದರ್ಶಿ ಕಳೆದ 21ನೇ ತಾರೀಕಿಗೆ ಕಳುಹಿಸಿಕೊಟ್ಟಿದ್ದರು. ಮೂರು ದಿವಸಗಳೊಳಗೆ ಉತ್ತರ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ. ಹತ್ತು ಶಾಲೆಗಳಿಗೆ ಈ ರೀತಿ ಅವರು ಪತ್ರ ಬರೆದಿದ್ದಾರೆ. ಇದರಲ್ಲಿ ಮೂರು ಶಾಲೆಗಳು ಕಾರ್ಯದರ್ಶಿಗೆ ಉತ್ತರ ನೀಡಿವೆ. ಪತ್ರದಲ್ಲಿ ಎನ್ಪಿಆರ್ ನವೀಕರಣವನ್ನೂ ಸೂಚಿಸಲಾಗಿದೆ.
ಈ ತಿಂಗಳ 14ಕ್ಕೆ ಮೊದಲು ತಿರುವನಂತಪುರಂ ಸೆನ್ಸಸ್ ನಿರ್ದೇಶನಾಲಯದಿಂದ ನಗರಸಭೆಗೆ ಪತ್ರ ಬಂದಿತ್ತು. 25ನೆ ತಾರೀಕಿಗೆ ಮತ್ತೊಂದು ಪತ್ರ ನಗರ ಸಭಾ ಅದಿಕಾರಿಗಳಿಗೆ ಬಂದಿದೆ. ನಂತರ ನಗರಸಭಾ ಕಾರ್ಯದರ್ಶಿಗಳು ಶಾಲೆಗಳಿಗೆ ಪತ್ರ ಬರೆದಿದ್ದಾರೆ. ಜನಸಂಖ್ಯೆಯ ಲೆಕ್ಕ ತೆಗೆಯುವ ವೇಳೇ ಎನ್ಪಿಆರ್ ಗೆ ಸಂಬಂಧಿಸಿದ ಲೆಕ್ಕವನ್ನು ತೆಗೆಯಲಾಗುವುದು ಎಂದು ಜನವರಿ ಹದಿನಾರರಂದು ಪ್ರಿನ್ಸಿಪಾಲ್ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಎನ್ಪಿಆರ್ ನಿಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದ ಬಳಿಕವೂ ಕೇರಳದಲ್ಲಿ ಇವೆಲ್ಲ ನಡೆಯುತ್ತಿದೆ.












