ಖಾಸಿಂ ಸುಲೈಮಾನಿಯನ್ನು ಹತ್ಯೆಗೈದ ಡಾರ್ಕ್ ಪ್ರಿನ್ಸ್ ವಿಮಾನಾಪಘಾತದಲ್ಲಿ ಸಾವು- ವರದಿ

0
2573

ಸನ್ಮಾರ್ಗ ವಾರ್ತೆ

ಟೆಹ್ರಾನ್, ಜ. 29: ಉಸಾಮಾ ಬಿನ್ ಲಾದನ್ ಮತ್ತು ಇರಾನಿನ ಜನರಲ್ ಖಾಸಿಂ ಸುಲೈಮಾನಿಯನ್ನು ಕೊಂದ ಸಿಐಎ ಉನ್ನತ ಅಧಿಕಾರಿ ವಿಮಾನ ಅಪಘಾತದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಇವರು ಸಂಚರಿಸಿದ ವಿಮಾನ ಅಫ್ಘಾನಿಸ್ತಾನದ ಗಝನಿಯಲ್ಲಿ ಪತನವಾಗಿದೆ ಎಂದು ವರದಿಯಾಗಿದೆ. ಇರಾನ್ ಮಾಧ್ಯಮಗಳು ಈ ವಿವರವನ್ನು ಹೊರಬಿಟ್ಟಿದೆ. ಕಳೆದ ದಿವಸ ಅಫಘಾನಿನ ಪ್ರಯಾಣಿಕ ವಿಮಾನ ಪತನವಾಗಿದೆ ಎಂದು ವರದಿಯಾಗಿತ್ತು. ಅಪಘಾನಿಸ್ತಾನ ಇದನ್ನು ನಂತರ ನಿಷೇಧಿಸಿತ್ತು. ಅದರೆ ಅಮೆರಿಕದ ವಿಮಾನ ಪತನವಾಗಿತ್ತು ಎಂದು ನಂತರ ದೃಢೀಕರಿಸಲಾಗಿತ್ತು.

ಸಿಐಎಯ ಉನ್ನತ ಅಧಿಕಾರಿ ಮೈಕಲ್ ಡಿ ಆಂಡ್ರಿ ಕೊಲ್ಲಲ್ಪಟ್ಟರೆಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಡಾರ್ಕ್ ಪ್ರಿನ್ಸ್, ಅಯುತುಲ್ಲ ಮೈಕ್ ಎಂದು ಇವರು ಪರಿಚಿತರಾಗಿದ್ದರು. ಡಾರ್ಕ್ ಪ್ರಿನ್ಸ್ ಕೊಲ್ಲಲ್ಪಟ್ಟಿದ್ದಾರೆ ಎಂದು ಇರಾನಿನ ಸ್ಟೇಟ್ ಟಿವಿ ಹೇಳಿದೆ. 2017ರಲ್ಲಿ ಟ್ರಂಪ್ ಆಡಳಿತವು ಸಿಐಎ ಮುಖ್ಯಸ್ಥರನ್ನಾಗಿ ಇವರನ್ನು ನೇಮಿಸಿತ್ತು.

ಅಮೆರಿಕದ ವಿದೇಶ ನೀತಿಯ ಕುರಿತು ವೆಟರನ್ಸ್ ಟುಟೆ ಎಂಬ ವೆಬ್‍ಸೈಟ್ ಮತ್ತು ರಷ್ಯನ್ ಗುಪ್ತಚರ ಮೂಲಗಳನ್ನು ಉದ್ದೇಶಿಸಿ ಡಿ ಆಂಡ್ರಿ ಕೊಲ್ಲಲ್ಪಟ್ಟಿದ್ದಾರೆ ಎನ್ನಲಾಗಿದೆ.

ಸಾವಿರಾರು ಭಯೋತ್ಪಾದಕರು, ನೂರಾರು ಸಾಮಾನ್ಯರನ್ನು ಕೊಂಡು ಹಾಕಿದ ಅಮೆರಿಕದ ಅಫ್ಘಾನ್‍ನನ ಡ್ರೋನ್ ದಾಳಿಯ ಮೇಲ್ನೋಟವನ್ನು ಡಿ ಆಂಡ್ರಿಯೋ ವಹಿಸಿದ್ದರು. ಸುಲೈಮಾನಿಯ ವಿರುದ್ಧ ಡ್ರೋನ್ ದಾಳಿಯ ಸೂತ್ರಧಾರಿ ಇವರಾಗಿದ್ದರೆಂದು ಇರಾನ್ ಸ್ಟೇಟ್ ಟಿವಿ ವರದಿ ಮಾಡಿದೆ. ಆದರೆ ವರದಿಗೆ ಅಮೆರಿಕ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದ ಬಾಂಬರ್ ಡಿಯರ್-11ಎ ವಿಮಾನ ಪತನವಾಗಿದೆ ಎಂದು ಅಫ್ಘಾನಿನ ಅಮೆರಿಕ ಸೈನಿಕ ವಕ್ತಾರ ಕರ್ನಲ್ ಸೋಣಿ ಲೆಗೆಟ್ ದೃಢೀಕರಿಸಿದ್ದಾರೆ. ಅಫಘಾತದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಅಪಘಾತದ ಅವಶೇಷಗಳನ್ನು ಅಮೆರಿಕ ಪತ್ತೆಹಚ್ಚಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅದರೆ ಇದುವರೆಗೆ ಯಾರನ್ನೂ ಗುರುತಿಸಲಾಗಿಲ್ಲ. ಅಪಘಾತದಲ್ಲಿ ಸಿಐಎ ಅಧಿಕಾರಿಗಳು ಸಾವಿಗೀಡಾಗಿದ್ದಾರೆ ಎಂದು ಮೊದಲು ತಾಲಿಬಾನ್ ಹೇಳಿತ್ತು. ಅಪಘಾತದಲ್ಲಿ ಒಂದಕ್ಕೂ ಹೆಚ್ಚು ಸಿಐಎ ಅಧಿಕಾರಿಗಳು ಸಾವಿಗೀಡಾಗಿದ್ದಾರೆ ಎಂದು ತಾಲಿಬಾನ್ ವಕ್ತಾರ ಸೋಮವಾರ ಹೇಳಿಕೆ ನೀಡಿದ್ದರು. ಆದರೆ ಮೃತಪಟ್ಟವರ ಹೆಸರುಗಳು ಸಂಖ್ಯೆ, ರ್ಯಾ೦ಕ್‍ಗಳನ್ನು ತಿಳಿಸಿಲ್ಲ. ಅದರೆ ಅಪಘಾತದಲ್ಲಿ ಇಬ್ಬರಿಂದ ಏಳು ಮಂದಿವರೆಗೆ ಸಾವಿಗೀಡಾಗಿದ್ದಾರೆ ಎಂದು ವರದಿಗಳಿವೆ.