ಶರ್ಜಿಲ್ ಇಮಾಮ್‍ಗಳಂತಹ ಕೀಟಗಳನ್ನು ನಾಶಪಡಿಸಬೇಕು-ಶಿವಸೇನೆ

0
996

ಸನ್ಮಾರ್ಗ ವಾರ್ತೆ

ಮುಂಬೈ, ಜ. 29: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಯ ವೇಳೆ ಕೋಮುವಾದ ಬೆಳೆಸುವ ಹೇಳಿಕೆ ನೀಡಿದ ಜೆಎನ್‍ಯು ಸಂಶೋಧನಾ ವಿದ್ಯಾರ್ಥಿ ಶರ್ಜಿಲ್ ಇಮಾಮ್‍ನಂತಹ ಕೀಟಗಳನ್ನು ನಾಶಪಡಿಸಬೇಕೆಂದು ಗೃಹ ಸಚಿವ ಅಮಿತ್ ಶಾರಿಗೆ ಶಿವಸೇನೆ ಆಗ್ರಹಿಸಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಶರ್ಜಿಲ್ ಇಮಾಮ್‍ರನ್ನು ಬಂಧಿಸಿದ ಕ್ರಮವನ್ನು ಬೆಂಬಲಿಸಿ ಲೇಖನ ಬರೆಯಲಾಗಿದೆ. ಚಿಕನ್ ನೆಕ್ ಬಂಗಾಳದ ಸಿಲಿಗುರಿಯಿಂದ ಅಸ್ಸಾಮ್‍ನ ಗುವಾಹಟಿಯವರೆಗೆ ಜೋಡಿಸುವ 22 ಕಿಲೋಮೀಟರ್ ಕಾರಿಡಾರ್ ಅನ್ನು ವಶಪಡಿಸಿ ಭಾರತವನ್ನು ವಿಭಜಿಸಬೇಕೆಂದು ಶರ್ಜಿಲ್ ಆಗ್ರಹಿಸಿದ್ದರು ಎಂಬ ಆರೋಪ ಇದೆ. ಆತನ ಕೈಕಡಿದು ಚಿಕನ್ಸ್ ನೆಕ್‍ನಲ್ಲಿ ಪ್ರದರ್ಶಿಸಬೇಕಾಗಿದೆ. ಇಂತಹ ಕೀಟಗಳನ್ನು ಗೃಹ ಸಚಿವ ಅಮಿತ್ ಶಾ ಕೂಡಲೆ ನಾಶಪಡಿಸಬೇಕು. ಜೊತೆಗೆ ಶಾರ್ಜಿಲ್ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸುವುದನ್ನು ನಿಲ್ಲಿಸಬೇಕೆಂದು ಸಂಪಾದಕೀಯದಲ್ಲಿ ಶಿವಸೇನೆ ಆಗ್ರಹಿಸಿದೆ.

ಸಿಎಎಯ ವಿರುದ್ಧ ದೇಶಾದ್ಯಂತ ನಡೆಯುವ ಶಾಂತಿಯುತ ಪ್ರತಿಭಟನೆಗಳಿಗೆ ಶರ್ಜಿಲ್‍ನ ಹೇಳಿಕೆ ಮಂಕುಕವಿಯುವಂತೆ ಮಾಡಿದೆ. ಪ್ರತಿಭಟನೆಯಲ್ಲಿ ಯಾರೂ ಇಂತಹ ಹೇಳಿಕೆ ನೀಡಿಲ್ಲ. ಶರ್ಜಿಲ್‍ನಂತಹ ಜನರನ್ನು ಏನೂ ಮಾಡದೆ ದಿಲ್ಲಿ ಚುನಾವಣೆಯಲ್ಲಿ ಈ ವಿಷಯವನ್ನು ಎತ್ತಿಹಿಡಿಯಲು ಬಿಜೆಪಿ ಬಳಸುತ್ತಿದೆ. ದೇಶದ ಸಾಮಾಜಿಕ, ಧಾರ್ಮಿಕ ಒಗ್ಗಟ್ಟು ಇಂತಹ ಹೇಳಿಕೆಗಳಿಂದ ಇಲ್ಲದಾಗುತ್ತದೆ. ಕೋಮುಗಲಭೆ, ಆಂತರಿಕ ಯುದ್ಧ ಸೃಷ್ಟಿಸುವ ಗೂಢಲೋಚನೆ ಇದು. ಶಿಕ್ಷಣವೇತ್ತರಲ್ಲಿ ಮತ್ತು ಸವರ್ಣರಲ್ಲಿ ತೀವ್ರವಾದ ಹೆಚ್ಚಳಗೊಳಿಸಲು ಕೆಲವರು ಯತ್ನಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಆಗದಂತೆ ಸರಕಾರ ತಡೆಯಬೇಕೆಂದು ಶಿವಸೇನೆ ಆಗ್ರಹಿಸಿದೆ.