ಮೇ ದೂ೦ಗಾ ಆಜಾದಿ ಎನ್ನುತ್ತಾ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿ: ಜಾಮಿಯಾ ವಿದ್ಯಾರ್ಥಿಗೆ ಗಾಯ- ವೀಡಿಯೊ

0
2201

ಸನ್ಮಾರ್ಗ ವಾರ್ತೆ

ದೆಹಲಿ; ಜ. 30- ಜಾಮಿಯಾ ಮಿಲ್ಲಿಯಾ ಪ್ರದೇಶದಲ್ಲಿ ಇವತ್ತು (ಜ. 30) ನಡೆದ ಸಿಎಎ ವಿರೋಧಿ ಪ್ರತಿಭಟನೆಯವೇಳೆ ವ್ಯಕ್ತಿಯೊಬ್ಬ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರತಿಭಟನಾ ನಿರತ ವಿದ್ಯಾರ್ಥಿಗೆ ಗುಂಡಿಕ್ಕಿದ್ದಾನೆ. ಗುಂಡು ಹಾರಿಸುವ ಮೊದಲು ‘ಯಾರಿಗೆ ಬೇಕು ಅಜಾದಿ ಎಂದು ಕೂಗಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ ಪಿ ಆರ್ ವಿರುದ್ಧ ಪ್ರತಿಭಟನೆ ನಡೆಸಲು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಭಟನಾಕಾರರು ರಾಜ್‌ಘಾಟ್ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಪ್ರತಿಭಟನಾ ರ್ಯಾಲಿಯಲ್ಲಿ ಗುಂಡು ಹಾರಿಸುವ ಮೊದಲು ದಾಳಿಕೋರ ‘ ಯಾರಿಗೆ ಬೇಕು ಅಜಾದಿ ‘ ಎಂದು ಕೂಗಿದ. ” ಕಿಸ್ಕೊ ಚಾಹಿಯೆ ಅಜಾದಿ? ಮೇ ದುಂಗಾ ಆಜಾದಿ ಎಂದು ಆತ ಕೂಗಿದ್ದಾನೆ.

ಕಪ್ಪು ಜಾಕೆಟ್ ಧರಿಸಿ, ಬಂದೂಕು ಹಿಡಿದುಕೊಂಡು, ವಿಶ್ವವಿದ್ಯಾನಿಲಯದ ಹೊರಗೆ ನಿಯೋಜಿಸಲಾದ ಡಜನ್ ಗಟ್ಟಲೆ ಪೊಲೀಸರಿಂದ ಮೀಟರ್ ದೂರದಲ್ಲಿ ಈತ ನಿಂತಿದ್ದ. ಅಲ್ಲಿ ಜಾಮಿಯಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಬಳಿ ಮೆರವಣಿಗೆಗಾಗಿ ಪ್ರತಿಭಟನಾಕಾರರು ಜಮಾಯಿಸಿದ್ದರು.

ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಆತ ತನ್ನನ್ನು ಗೋಪಾಲ್ ಎಂದು ಗುರುತಿಸಿಕೊಂಡಿದ್ದಾನೆ. ಈ ಮಧ್ಯೆ ಗಾಯಗೊಂಡ ವಿದ್ಯಾರ್ಥಿಯನ್ನು ಜಾಮಿಯಾ ಮಿಲ್ಲಿಯಾ ಸಮೂಹ ಸಂವಹನ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿ ಶಾದಾಬ್ ನಜರ್ ಎಂದು ಗುರುತಿಸಲಾಗಿದೆ. ಅವರನ್ನು ಜಾಮಿಯಾ ಪ್ರದೇಶದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದಕ್ಕೂ ಮುನ್ನ ಮಂಗಳವಾರ, ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಶಾಹೀನ್ ಬಾಗ್‌ನಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಿ ಸಿಎಎ ವಿರೋಧಿ ಆಂದೋಲನಕಾರರಿಗೆ ಬೆದರಿಕೆ ಹಾಕಿದ್ದ.

ಪೊಲೀಸರ ಪ್ರಕಾರ, ಆ ವ್ಯಕ್ತಿಯನ್ನು ಶಹೀನ್ ಬಾಗ್ ನಿವಾಸಿ ಮೊಹಮ್ಮದ್ ಲುಕ್ಮಾನ್ (50) ಎಂದು ಗುರುತಿಸಲಾಗಿದ್ದು, ಪರವಾನಗಿ ಪಡೆದ ಪಿಸ್ತೂಲ್ ಆತನಲ್ಲಿತ್ತು.