ಕೊರೊನ ವೈರಸ್: ಚೀನದಲ್ಲಿ 213 ಮಂದಿ ಸಾವು; ತುರ್ತು ಪರಿಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಘಟನೆಗಳು

0
1294

ಸನ್ಮಾರ್ಗ ವಾರ್ತೆ

ಜನೀವಾ, ಜ. 31: ಕೊರೊನಾ ವೈರಸ್ ವೇಗವಾಗಿ ಹರಡುತ್ತಿದ್ದು ಲೋಕಾದ್ಯಂತ ಬಿಗುವಿನ ಪರಿಸ್ಥಿತಿ ತಲೆದೋರಿದ್ದು ವಿಶ್ವ ಆರೋಗ್ಯ ಸಂಘಟನೆಗಳು ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಗಡಿಯನ್ನು ಮುಚ್ಚುವುದು, ವಿಮಾನ ಸರ್ವಿಸ್ ರದ್ದುಪಡಿಸುವುದು ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವುದು ಆಯಾ ದೇಶಗಳು ಮಾಡಬೇಕಾಗಿದೆ. ಈಗ ಪರಿಸ್ಥಿತಿ ಗಂಭೀರವಾಗಿದೆ ಎಂದು ವಿಶ್ವಾರೋಗ್ಯ ಸಂಘಟನೆಯ ಮುಖ್ಯಸ್ಥ ಟೆಂಡ್ರೊಸ್ ಅದನಂ ಗಬ್ರಿಯೋಸಸ್ ತಿಳಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆ ಸದಸ್ಯ ದೇಶಗಳಿಗೆ ನೋಟಿಸು ಜಾರಿ ಮಾಡಲಿದೆ. ಈಗ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸುವ ಸ್ಥಿತಿಗತಿ ಇಲ್ಲ ಎಂದು ಗಬ್ರಿಯೊಸಸ್ ಹೇಳಿದರು. ಈ ಹಿಂದೆ ಸಾರ್ಸ್ ವೈರಸ್ ವೇಳೆಯೂ ಇಂತಹದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿಸಲಾಗಿತ್ತು . ಇದೇ ವೇಳೆ ಕೊರೊನಾ ವೈರಸ್‍ನಿಂದ ಸತ್ತವರ ಸಂಖ್ಯೆ 213ಕ್ಕೇರಿದೆ. ಚೀನದ ಹುಬೆಯ್ ನಲ್ಲಿ ಹೊಸದಾಗಿ 42 ಮಂದಿ ರೋಗಕ್ಕೆ ಬಲಿಯಾಗಿದ್ದಾರೆ. ಇಲ್ಲಿ 1200 ಮಂದಿಗೆ ರೋಗ ಬಂದಿದೆ. ಚೀನದ 9000 ಮಂದಿ ಜೊತೆಗೆ ಜಗತ್ತಿನಲ್ಲಿ 9700 ಮಂದಿಗೆ ವೈರಸ್ ಕಂಡು ಬಂದಿದೆ. ಚೀನದ ಹೊರಗೆ 20 ದೇಶಗಳಲ್ಲಿ ರೋಗ ಪತ್ತೆಯಾಗಿದೆ. ಭಾರತದಲ್ಲಿ, ಫಿಲಿಫೈನ್ಸ್ ನಲ್ಲಿ ಕೊನೆಯದಾಗಿ ಕೊರೊನಾ ವೈರಸ್‍ ದೃಢಪಟ್ಟಿದೆ.