ಗುಂಡು ಹಾರಾಟ: ದಿಲ್ಲಿ ಪೊಲೀಸ್ ಕೇಂದ್ರದಲ್ಲಿ ಪ್ರತಿಭಟಿಸಿದವರು ಪೊಲೀಸ್ ವಶಕ್ಕೆ

0
901

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 31: ಜಾಮಿಯ ಮಿಲ್ಲಿಯ ಯುನಿವರ್ಸಿಟಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ಘಟನೆಯನ್ನು ವಿರೋಧಿಸಿ ದಿಲ್ಲಿ ಪೊಲೀಸ್ ಕೇಂದ್ರ ಕಚೇರಿಯ ಮುಂದೆ ಪ್ರತಿಭಟಿಸಿದವರನ್ನು ವಶಕ್ಕೆ ಪಡೆದು ಪೊಲೀಸರು ತೆರವುಗೊಳಿಸಿದರು.

ಪ್ರತಿಭಟನೆ ರಾತ್ರೆಯಿಡೀ ಮುಂದುವರಿದ್ದರಿಂದ 60ರಷ್ಟು ಪ್ರತಿಭಟನಾಕಾರರನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಕಸ್ಟಡಿಗೆ ಪಡೆದರು. ಇವರನ್ನು ದಿಲ್ಲಿ ಪೊಲೀಸ್ ಕಚೇರಿ ಮುಂದಿನಿಂದ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ಕರೆತರಲಾಯಿತು. ಕಸ್ಟಡಿಗೆ ಪಡೆಯುವುದನ್ನು ವಿರೋಧಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಲಪ್ರಯೋಗಿ ಬಸ್‍ನೊಳಗೆ ಹಾಕಿದರು. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಜಾಮಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಗುರುವಾರ ಮಧ್ಯಾಹ್ನ ರಾಂ ಭಕ್ತ್ ಗೋಪಾಲ್ ಎಂಬಾತ ಗುಂಡು ಹಾರಿಸಿದ್ದ. ಇದರಿಂದ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ. ತದನಂತರ ಭಾರೀ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮತ್ತು ರಾಜಕೀಯ ಕಾರ್ಯಕರ್ತರ ಸಹಿತ ಸಾವಿರಾರು ಮಂದಿ ಯುನಿವರ್ಸಿಟಿಯ ಹೊರಗೆ ಸೇರಿದರು.

ಇತ್ತೀಚೆಗೆ ಹಲವು ಪ್ರಚೋದಕ ಭಾಷಣ ಮಾಡಿದ ಬಿಜೆಪಿ ಅನುರಾಗ್ ಠಾಕೂರ್, ಕಪಿಲ್ ಮಿಶ್ರ, ಪರ್‍ವೇಶ್ ವರ್ಮರ ವಿರುದ್ಧ ಗುರುವಾರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಗೊಪಾಲ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಜಾಮಿಯ ಮಿಲಿಯ ಇಸ್ಲಾಮಿಯ ಅಲುಮ್‍ನಿ ಅಸೋಸಿಯೇಶನ್ ನ್ಯೂ ಫ್ರಂಡ್ರಸ್ ಕಾಲನಿ ಪೊಲೀಸರಿಗೆ ಬರಹ ಮೂಲಕ ಆಗ್ರಹ ಸಲ್ಲಿಸಿದ್ದಾರೆ. ಗುಂಡು ಏಟಿನಿಂದ ಗಾಯಗೊಂಡ ವಿದ್ಯಾರ್ಥಿ ಶಾದಾಬ್ ನಜರ್ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ವಿಶ್ವವಿದ್ಯಾನಿಲಯ ವಹಿಸಿಕೊಳ್ಳಲಿದೆ ಎಂದು ವೈಸ್ ಚಾನ್ಸಲರ್ ನಜ್ಮಾ ಅಕ್ತರ್ ತಿಳಿಸಿದರು.