ಆಮ್ ಆದ್ಮಿ ಪಾರ್ಟಿಯ ಹೆಸರು ಮುಸ್ಲಿಂ ಲೀಗ್ ಎಂದಿಡಬೇಕು-ಕಪಿಲ್ ಮಿಶ್ರ

0
508

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 3 : ವಿವಾದಿತಹೇಳಿಕೆಯ ಕಾರಣದಿಂದ ಚುನಾವಣಾ ಆಯೋಗ ಎಚ್ಚರಿಕೆ ನೀಡಿರುವ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರ ಪುನಃ ವಿವಾದಿತ ಹೇಳಿಕೆ ನೀಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಹೆಸರನ್ನು ಮುಸ್ಲಿಂ ಲೀಗ್ ಎಂದು ಬದಲಾಯಿಸಬೇಕೆಂದು ಅವರು ಟ್ವೀಟ್ ಮಾಡಿದ್ದು ಉಮರ್ ಖಾಲಿದ್, ಅಫ್ಝಲ್ ಗುರು, ಬುರ್‍ಹಾನ್ ವಾನಿಯನ್ನು ತಂದೆಗೆ ಸಮಾನರಾಗಿ ಕಾಣುವವರೆಲ್ಲರಿಗೂ ಯೋಗಿ ಆದಿತ್ಯನಾಥರ ಹೆದರಿಕೆಯಿದೆ ಎಂದು ಅವರು ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ. ದಿಲ್ಲಿ ಮಾಡೆಲ್ ಟೌನ್ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು. ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರಿಗೆ 48 ಗಂಟೆಗಳ ಪ್ರಚಾರ ನಿಷೇಧವನ್ನು ಚುನಾವಣಾ ಆಯೋಗ ಕಳೆದ ದಿನ ವಿಧಿಸಿತ್ತು.

ಫೆಬ್ರುವರಿ ಎಂಟರಂದು ದಿಲ್ಲಿಯ ವಿಧಾನಸಭಾ ಚುನಾವಣೆ ನಡೆಯಲಿದೆ. ಅಂದು ದಿಲ್ಲಿಯ ಬೀದಿಗಳಲ್ಲಿ ಭಾರತ ಪಾಕಿಸ್ತಾನ ಪರಸ್ಪರ ಘರ್ಷಣೆ ನಡೆಸಲಿವೆ ಎಂದು ಕಪಿಲ್ ಮಿಶ್ರ ಹೇಳಿಕೆ ನೀಡಿದ್ದರು.