ಭಾರತದಲ್ಲಿ ಹತ್ತು ಮಂದಿಯಲ್ಲಿ ಒಬ್ಬರಿಗೆ ಯಾವುದಾದರೊಂದು ರೀತಿಯ ಕ್ಯಾನ್ಸರ್

0
714

ಸನ್ಮಾರ್ಗ ವಾರ್ತೆ

ವಿಶ್ವಸಂಸ್ಥೆ, ಫೆ. 5: ಭಾರತದಲ್ಲಿ ಹತ್ತರಲ್ಲಿ ಒಬ್ಬರಿಗೆ ಯಾವುದಾದರೊಂದು ರೀತಿಯ ಕ್ಯಾನ್ಸರ್ ರೋಗವುಂಟಾಗುತ್ತಿದೆ. ಹದಿನೈದರಲ್ಲಿ ಒಬ್ಬರು ಕ್ಯಾನ್ಸರಿನಿಂದ ಸಾಯುತ್ತಿದ್ದಾರೆ ಎಂದು ಡಬ್ಲ್ಯೂ ಎಚ್‍ಒ ಸಂಘಟನೆಯ ಕ್ಯಾನ್ಸರ್ ಸಂಶೋಧನಾ ಏಜೆನ್ಸಿ ವರದಿಯಲ್ಲಿ ತಿಳಿಸಲಾಗಿದೆ. 2018ರಲ್ಲಿ ಭಾರತದಲ್ಲಿ ಹೊಸದಾಗಿ 11.6 ಲಕ್ಷ ಮಂದಿಗೆ ಕ್ಯಾನ್ಸರ್ ತಗಲಿದೆ. 7,84,800 ಮಂದಿ ಕ್ಯಾನ್ಸರಿನಿಂದ ಮೃತಪಟ್ಟಿದ್ದಾರೆ. 135 ಕೋಟಿ ಜನರಲ್ಲಿ ಐದು ವರ್ಷಗಳಿಂದ ಚಿಕಿತ್ಸೆಯಲ್ಲಿರುವವರಲ್ಲಿ 22.6 ಲಕ್ಷ ಮಂದಿಗೆ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಿವೆ ಎಂದು ವರದಿ ತಿಳಿಸುತ್ತಿದೆ.

ಭಾರತದಲ್ಲಿ ಹೊಸದಾಗಿ ರೋಗ ಕಂಡು ಬಂದವರಲ್ಲಿ ಹೆಚ್ಚು ಮಂದಿ ಸ್ತನ ಕ್ಯಾನ್ಸರಿನಿಂದ ನರಳುತ್ತಿದ್ದಾರೆ. ಇಂತಹವರ ಸಂಖ್ಯೆ 1,62,500 ಆಗಿದೆ. ಬಾಯಿ ಕ್ಯಾನ್ಸರ್(1,20,000) ಆಗಿದೆ. ಗರ್ಭಾಶಯ ಕ್ಯಾನ್ಸರ್ (97,000), ಶ್ವಾಸಕೋಶ ಕ್ಯಾನ್ಸರ್ (68,,000), ಹೊಟ್ಟೆ ಕ್ಯಾನ್ಸರ್ (57,000), ಕರುಳಿನ ಕ್ಯಾನ್ಸರ್ (57,000), ರೋಗಿಗಳಲ್ಲಿ ಈ ವಿಭಾಗದವರು ಅರ್ಧಾಂಶ ಇದ್ದು ಹೊಸದಾಗಿ ರೋಗ ಕಂಡು ಬಂದವರಲ್ಲಿ 5, 87,000 ರೋಗ ಮಹಿಳೆಯರಿಗೆ ಇದೆ. ಸ್ತನಾರ್ಬುದ, ಅಂಡಾಶಯ ಕ್ಯಾನ್ಸರ್ (36,000), ಬಾಯಿ ಕ್ಯಾನ್ಸರ್ (28,000) ಮಹಿಳೆಯರಲ್ಲಿ ಹೆಚ್ಚಿದೆ. ಪುರುಷರಲ್ಲಿ 5. 7 ಲಕ್ಷ ಹೊಸ ರೋಗಿಗಳಿದ್ದು ಇವರಲ್ಲಿ ಬಾಯಿ ಕ್ಯಾನ್ಸರ್ (92,000), ಶ್ವಾಸಕೋಶ ಕ್ಯಾನ್ಸರ್ (49,000), ಹೊಟ್ಟೆ ಕ್ಯಾನ್ಸರ್ (39,000), ಅನ್ನನಾಳ ಕ್ಯಾನ್ಸರ್ (34,000) ಮಂದಿಯಲ್ಲಿ ಇದೆ.