ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 12: ಅತ್ತ ದಿಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಗಿಯುತ್ತಿದ್ದಂತೆ ಇತ್ತ ತೈಲ ಕಂಪೆನಿಗಳು ಅಡಿಗೆ ಅನಿಲ ಸಿಲಿಂಡರ್ ಗೆ ಬೆಲೆ ಹೆಚ್ಚಿಸಿದೆ. ಗೃಹಿಣಿಯರಿಗೆ ಇದೊಂದು ದೊಡ್ಡ ಹೊರೆಯಾಗುವ ಸಾಧ್ಯತೆಯನ್ನು ಸೃಷ್ಟಿಸಿದ್ದು ಈಗ ತೈಲಕಂಪೆನಿಗಳು ಒಂದೇಟಿಗೆ 146 ರೂಪಾಯಿ ಹೆಚ್ಚಳವನ್ನು ಮಾಡಿದೆ.
ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ಸ್ವಲ್ಪ ಮೊದಲು ದರ ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಅಡಿಗೆಗೆ ಬಳಸುವ 14 ಕಿಲೊಗ್ರಾಂನ ಸಿಲಿಂಡರ್ ಬೆಲೆ 850 ರೂಪಾಯಿಗೇರಿಕೆಯಾಗಿದ್ದು, ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ಬೆಲೆಯನ್ನು ಕಳೆದ ವಾರ ಹೆಚ್ಚಿಸಲಾಗಿತ್ತು.












