ಕೇಜ್ರಿವಾಲ್ ಬಹುಮತ 21,697; ಅಮಾನುಲ್ಲಾ ಖಾನ್‍ರ ಬಹುಮತ ಎಪ್ಪತ್ತು ಸಾವಿರಕ್ಕೂ ಹೆಚ್ಚು

0
2489

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 12: ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಯೋಜಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಿಲ್ಲಿ ವಿಧಾನಸಭಾ ಕ್ಷೇತ್ರದಿಂದ 21,697 ಮತಗಳ ಅಂತರದಿಂದ ಬಿಜೆಪಿಯ ನಿಕಟ ಸ್ಪರ್ಧಿ ಸುನೀಲ್ ಕುಮಾರ್ ರನ್ನು ಸೋಲಿಸಿದ್ದಾರೆ. ಕೇಜ್ರಿವಾಲರಿಗೆ 46,758 ಮತಗಳಿಸಿದರೆ ಬಿಜೆಪಿಯ ಸುನೀಲ್ ಕುಮಾರ್ ಯಾದವ್ 25,061 ಮತಗಳನ್ನು ಪಡೆದರು. ಮೂರು ಸಾವಿರದ ಇನ್ನೂರ ಇಪ್ಪತ್ತು ಮತಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಸಬರವಾಲ್ ಮೂರನೆ ಸ್ಥಾನ ಪಡೆದರು. ಆಮ್ ಆದ್ಮಿ ಪಾರ್ಟಿಯ ಸಂಜೀವ್ ಝಾರಿಗೆ ಅಮಾನತುಲ್ಲಾ ಖಾನ್‍ರಿಗೂ ಬೃಹತ್ ಬಹುಮತ ಸಿಕ್ಕಿದೆ. ಒಕ್ಲಾದಲ್ಲಿ ದಿಲ್ಲಿ ವಕ್ಫ್ ಬೋರ್ಡ್ ಚೇರ್‍ಮೆನ್ ಅಮಾನತುಲ್ಲಾ ಖಾನ್ 71,827 ಮತಗಳ ಅಂತರದಿಂದ ಸಮೀಪ ಸ್ಪರ್ಧಿಯನ್ನು ಸೋಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಮುಖ್ಯ ಕೇಂದ್ರವಾದ ಶಾಹೀನ್ ಬಾಗ್ ಜಾಮಿಅ ಪ್ರದೇಶದಲ್ಲಿ ಬರುತ್ತಿದೆ. ಬುರಾಡ ಕ್ಷೇತ್ರದಲ್ಲಿ ಸಂಜೀವ್ ಝಾರಿಗೆ 80,000 ಮತಗಳ ಬಹುಮತ ಸಿಕ್ಕಿದೆ. ಕಳೆದಬಾರಿ ಇವರು 64,532 ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ಬ್ರಹಂ ಸಿಂಗ್ ಇವರ ಪ್ರತಿಸ್ಪರ್ಧಿಯಾಗಿದ್ದರು.

ಅಮಾನತುಲ್ಲಾ ಖಾನ್ 1, 30,367 ಮತ ಗಳಿಸಿದರೆ, ಬಿಜೆಪಿಯ ಬ್ರಹಂ ಸಿಂಗ್‍ ಅವರ ವಿರುದ್ಧ ಸ್ಪರ್ಧಿಸಿ 58,540 ಮತ ಗಳಿಸಿದ್ದಾರೆ. ಕಾಂಗ್ರೆಸ್ಸಿನ ಪರ್ವೇಝ್ ಹಾಶ್ಮಿ 5123 ಮತಗಳಿಸಿದರು.