ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ.12: ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತ ಕೊಲೆಯಾದ ಗುಂಡು ಹಾರಾಟದಲ್ಲಿ ದುಷ್ಕರ್ಮಿಗೆ ಎಎಪಿ ಶಾಸಕ ನರೇಶ್ ಯಾದವ್ ಗುರಿಯಾಗಿರಲಿಲ್ಲ ಎಂದು ದಿಲ್ಲಿ ಪೊಲೀಸ್ ಹೇಳಿದೆ. ಆತ ಕೊಲೆಯಾದ ಎಎಪಿ ಕಾರ್ಯಕರ್ತನನ್ನು ಗುರಿಯಾಗಿಟ್ಟಿದ್ದ ಎಂದು ಸೌತ್-ವೆಸ್ಟ್ ಅಡಿಷನಲ್ ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ತಿಳಿಸಿದರು. ಗುಂಡು ಹಾರಾಟಕ್ಕೆ ಸಂಬಂಧಿಸಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿ ಒಬ್ಬನೇ ಕೃತ್ಯವೆಸಗಿದ್ದಾನೆ ಎಂದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ. ನರೇಶ್ ಯಾದವ್ ದುಷ್ಕರ್ಮಿಯ ಗುರಿಯಾಗಿರಲಿಲ್ಲ. ಕೊಲ್ಲಲ್ಪಟ್ಟ ಕಾರ್ಯಕರ್ತನ ಹತ್ಯೆ ಆರೋಪಿಯ ಉದ್ದೇಶವಾಗಿತ್ತು ಎಂದು ಡಿಸಿಪಿ ತಿಳಿಸಿದರು ಮಂಗಳವಾರ ರಾತ್ರೆ ನರೇಶ್ ಯಾದವ್ ಮೇಲೆ ಗುಂಡು ಹಾರಾಟ ನಡೆದಿತ್ತು. ರಾತ್ರೆ ದೇವಸ್ಥಾನ ಹೋಗಿ ಮರಳುತ್ತಿದ್ದಾಗ ದುಷ್ಕರ್ಮಿಯ ಗುಂಡಿಗೆ ಶಾಸಕರ ಜೊತೆಗೆ ಇದ್ದ ಅಶೋಕ್ ಎಂಬ ಕಾರ್ಯಕರ್ತ ಕೊಲ್ಲಲ್ಪಟ್ಟಿದ್ದನು. ಇನ್ನೊಬ್ಬ ಕಾರ್ಯಕರ್ತ ಗಾಯಗೊಂಡಿದ್ದಾನೆ.
ಘಟನೆಯಲ್ಲಿ ಏಳು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಗುರುತಿಸಿದ್ದಾರೆ. ಘಟನೆ ದುರದೃಷ್ಟಕರ. ಇದರ ಹಿಂದಿನ ಉದ್ದೇಶ ಗೊತ್ತಿಲ್ಲ ಎಂದು ನರೇಶ್ ಯಾದವ್ ಹೇಳಿದರು. ದುಷ್ಕರ್ಮಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ನರೇಶ್ ಯಾದವ್ ಮೊಹರೌಲಿ ಶಾಸಕನಾಗಿದ್ದಾರೆ.












