ಮತದಾನ ಮೂಲಭೂತ ಹಕ್ಕಲ್ಲ : ದಿಲ್ಲಿ ಹೈಕೋರ್ಟು

0
832

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 13: ಮತದಾನ ಹಕ್ಕು ಮೂಲಭೂತ ಹಕ್ಕಲ್ಲ ಎಂದು ದಿಲ್ಲಿ ಹೈಕೋರ್ಟು ಹೇಳಿದ್ದು ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ ಕೊಟ್ಟಿರುವ ಮತಹಕ್ಕು ನಿಯಂತ್ರಣಗಳಿಗೆ ವಿಧೇಯವಾಗಿದೆ ಎಂದಿದೆ. ಕೈದಿಗಳಿಗೆ ಮತಹಾಕಲು ಅವಕಾಶ ಮಾಡಿಕೊಡಬೇಕೆಂದು ಸಲ್ಲಿಸಿದ ಸಾರ್ವಜನಿಕ ಅರ್ಜಿಯನ್ನು ತಿರಸ್ಕರಿಸಿ ಚೀಪ್ ಜಸ್ಟಿಸ್ ಡಿ ಎನ್ ಪಟೇಲ್, ಜಸ್ಟಿಸ್ ಸಿ. ಹರಿಶಂಕರ್ ಅವರಿದ್ದ ಹೈಕೋರ್ಟು ಪೀಠವು ಪತದಾನವು ಫಂಡಮೆಂಟ್ ರೈಟ್ಸ್ ನಲ್ಲಿ ಬರುವುದಿಲ್ಲ ಎಂದಿದೆ.

ಮತದಾನ ಹಕ್ಕು ಸಾರ್ವತ್ರಿಕ ಕಾನೂನು ಅಲ್ಲ. ಕೈದಿಗಳಿಗೆ ಮತದಾನ ಮಾಡಲು ಅನುಮತಿ ನೀಡುವುದಿಲ್ಲ ಎಂದು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ತಳ್ಳಿಹಾಕಿ ತೀರ್ಪು ನೀಡಿದೆ.