ಸನ್ಮಾರ್ಗ ವಾರ್ತೆ
ಅಯೋಧ್ಯೆ, ಫೆ. 19: ಬಾಬರಿ ಮಸೀದಿ ಕೆಡವಿದ ಸ್ಥಳದಲ್ಲಿ ರಾಮಮಂದಿರ ನಿರ್ಮಿಸುವಾಗ ಸಮೀಪದಲ್ಲಿರುವ ಕಬರಸ್ಥಾನವನ್ನು ಬಿಟ್ಟು ಕಟ್ಟಬೇಕೆಂದು ಹಿರಿಯ ಸುಪ್ರೀಂಕೋರ್ಟು ವಕೀಲ ಎಂ ಆರ್ ಶಂಶಾದ್ ಆಗ್ರಹಿಸಿದ್ದಾರೆ. ಈ ವಿಷಯವನ್ನು ಸೂಚಿಸಿ ಅವರು ರಾಮಮಂದಿರ ಟ್ರಸ್ಟ್ ಸದಸ್ಯರಿಗೆ ಪತ್ರ ಬರೆದಿದ್ದಾರೆ.
1885ರಲ್ಲಿ ಅಯೋಧ್ಯೆಯಲ್ಲಿ ನಡೆದ ಗಲಭೆಯಲ್ಲಿ ಕೊಲ್ಲಲ್ಪಟ್ಟಿದ್ದ 75 ಮುಸ್ಲಿಮರ ಮೃತದೇಹಗಳನ್ನು ಗಂಜ್ ಶಹೀದಾನ್ ಎಂಬ ಘೋರಿ ಸ್ಥಳದಲ್ಲಿ ದಫನ ಮಾಡಲಾಗಿತ್ತು. ಇದು ಫೈಝಾಬಾದ್ ಗಝೆಟ್ನಲ್ಲಿದೆ ಎಂದು ಪತ್ರದಲ್ಲಿ ವಕೀಲ ಎಂ. ಆರ್ . ಶಂಸಾದ್ ಸೂಚಿಸಿದ್ದಾರೆ. ಕೇಂದ್ರ ಸರಕಾರ ಈ ವಿಷಯವನ್ನು ಪರಿಗಣಿಸಿಲ್ಲ. ಸನಾತನ ಧರ್ಮದ ಆಧಾರದಲ್ಲಿ ಕಬರಸ್ಥಾನವನ್ನು ಬಿಟ್ಟು ನಿರ್ಮಾಣ ಕಾರ್ಯ ನಡೆಯಬೇಕಾಗಿದೆ ಎಂದು ಮುಸ್ಲಿಮರ ತಂಡವೊಂದಕ್ಕಾಗಿ ಬರೆದ ಪತ್ರದಲ್ಲಿ ಶಂಶಾದ್ ಸೂಚಿಸಿದ್ದಾರೆ.












