ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಫೆ. 19: ಕೊರೊನಾ ಪೀಡಿತ ವಲಯದಲ್ಲಿ ಇದ್ದು ಬಂದವರ ಸಹಿತ ಕೇರಳದ ವಿವಿಧ ಜಿಲ್ಲೆಗಳಲ್ಲಿ 2222 ಮಂದಿ ಮೇಲೆ ನಿಗಾ ಇರಿಸಲಾಗಿದೆ. ಇದೇವೇಳೆ ಹದಿಮೂರು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ.
ಶಂಕಿತ 425 ಮಂದಿಯ ರಕ್ತ ಸ್ಯಾಂಪಲ್ ಎನ್ಐವಿ ಪರೀಕ್ಷೆಗೆ ಕಳುಹಿಸಲಾಗಿದ್ದು ಇವರಲ್ಲಿ 420 ಮಂದಿ ಪರೀಕ್ಷೆ ಫಲಿತಾಂಶ ನೆಗೆಟಿವ್ ಆಗಿದೆ. ರೋಗ ದೃಢೀಕರಿಸಿದ ಮೂವರಲ್ಲಿ ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಇರುವ ವ್ಯಕ್ತಿಗಳ ಆರೋಗ ಸ್ಥಿತಿ ತೃಪ್ತಿಕರವಾಗಿ ಮುಂದುವರಿದಿದೆ. 59 ಮಂದಿಯ ಮೇಲೆ ಇರಿಸಲಾಗಿದ್ದ ನಿಗಾ ತೆರವುಗೊಳಿಸಲಾಗಿದೆ.












