ದಿಲ್ಲಿ ಉರಿಯುವಾಗ ಅಮಿತ್ ಶಾ ಎಲ್ಲಿದ್ದರು- ಚಾಟಿ ಬೀಸಿದ ಶಿವಸೇನೆ

0
1418

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 28: ಉತ್ತರ ದಿಲ್ಲಿಯಲ್ಲಿ 38 ಮಂದಿ ಗಲಭೆಯಲ್ಲಿ ಜೀವ ಕಳಕೊಳ್ಳುವಾಗ ಗೃಹಸಚಿವ ಅಮಿತ್ ಶಾ ಏನು ಮಾಡುತ್ತಿದ್ದರು ಎಂದು ಶಿವಸೇನೆ ಪ್ರಶ್ನಿಸಿದೆ. ಬೀದಿಯಲ್ಲಿ ಗಲಭೆ, ಗುಂಡು ಹಾರಾಟ ನಡೆದಾಗ ಮತ್ತು ಜನರು ಸತ್ತು ಬೀಳುವಾಗ ಅಮಿತ್ ಶಾ ಎಲ್ಲಿದ್ದರು? ಅವರು ಏನು ಮಾಡಿದ್ದಾರೆ? ಗಲಭೆ ನಡೆಯುವಾಗ ಹತ್ತಕ್ಕೂ ಹೆಚ್ಚು ಕೇಂದ್ರ ಸಚಿವರು ಅಲಹಾಬಾದಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಸ್ವಾಗತಿಸುವ ಗಡಿಬಿಡಿಯಲ್ಲಿದ್ದರು ಎಂದು ಶಿವಸೇನೆ ಮುಖವಾಣಿ ಸಾಮ್ನಾ ಟೀಕಿಸಿದೆ.

ಪೊಲೀಸಧಿಕಾರಿ ಸಹಿತ 38 ಮಂದಿ ಬಲಿಯಾಗಿದ್ದಾರೆ. ಸಾರ್ವಜನಿಕ ಆಸ್ತಿ ಮತ್ತು ಜನರ ಜೀವನೋಪಾಯ ನಷ್ಟವಾಗುವಾಗ ದೇಶದ ಬಲಿಷ್ಠ ಗೃಹಮಂತ್ರಿ ಎಲ್ಲಿದ್ದರು? ಆದರೆ ದಿಲ್ಲಿ ಸಂಪೂರ್ಣ ಉರಿಯುವಾಗ ಅವರು ಮರೆಯಾಗಿದ್ದು ನಡುಕವುಂಟು ಮಾಡಿತು. ದಿಲ್ಲಿ ಚುನಾವಣೆ ನಡೆಯುವಾಗ ಎಲ್ಲವನ್ನೂ ದೂರವಿಟ್ಟು ಪ್ರಚಾರ ರ್ಯಾಲಿಗಳಲ್ಲಿ ಅವರು ಸಕ್ರಿಯವಾಗಿದ್ದರು. ದಿಲ್ಲಿ ಸರಕಾರ ದುರ್ಬಲವಾಗಿರುವುದರಿಂದ ಅದು ಅಮಿತ್ ಶಾ ರಾಜೀನಾಮೆ ಕೇಳಿಲ್ಲ ಎಂದು ಸಾಮ್ನಾದ ಸಂಪಾದಕೀಯ ಆರೋಪಿಸಿದೆ.

ದಿಲ್ಲಿಯಲ್ಲಿ ಘರ್ಷಣೆ ಪೀಡಿತ ಪ್ರದೇಶಗಳ ಸಾಮಾನ್ಯ ಜನರ ಸುರಕ್ಷೆ ದೃಢಪಡಿಸಬೇಕೆಂದು ಆದೇಶ ಹೊರಡಿಸಿದ ಹೈಕೋರ್ಟು ನ್ಯಾಯಾಧೀಶ ಎಸ್. ಮುರಳೀಧರ್ ರನ್ನು 24 ಗಂಟೆಗಳೊಳಗೆ ವರ್ಗಾಯಿಸಿದ್ದು ನ್ಯಾಯ ನಿರಾಕರಣೆಯಾಗಿದೆ. ಸಾವರ್‍ಕರ್ ರ ಕುರಿತು ಚಿಂತಿಸುವ ಪಾರ್ಟಿ ದೇಶದ ಗೌರವದ ಕುರಿತು ಮೊದಲು ಚಿಂತಿಸಬೇಕೆಂದು ಸಾಮ್ನಾದಲ್ಲಿ ಶಿವಸೇನೆ ಚಾಟಿ ಬೀಸಿದೆ.