ಕೊರೊನಾ: ಭಾರತ ಕುರಿತು ಆತಂಕ ವ್ಯಕ್ತಪಡಿಸಿದ ಅಮೆರಿಕ

0
1113

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಫೆ. 28: ಚೀನದಲ್ಲಿ ಕಾಣಿಸಿಕೊಂಡು ಹೊರದೇಶಗಳಿಗೆ ಹಬ್ಬಿದ ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಮೆರಿಕದ ಇಂಟಲಿಜೆನ್ಸ್ ಏಜೆನ್ಸಿ ಭಾರತದ ಕುರಿತು ಆತಂಕ ವ್ಯಕ್ತಪಡಿಸಿದೆ. ಈಗ ಭಾರತದಲ್ಲಿ ಕೆಲವೇ ಕೊರೊನಾ ಪ್ರಕರಣಗಳು ವರದಿಯಾಗಿದ್ದರೂ ಚೀನದ ಹೊರಗೆ ವೈರಸ್ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ತಮಗೆ ಆತಂಕವಿದೆ ಎಂದು ಇಂಟೆಲಿಜೆನ್ಸ್ ಹೇಳುತ್ತಿದೆ. ಭಾರತದ ಕೊರೊನಾ ವೈರಸ್ ಹಬ್ಬದಂತೆ ತಡಯುವ ಪ್ರತಿರೋಧಕ ಸಾಮರ್ಥ್ಯದ ಕುರಿತು ಇಂಟಲಿಜೆನ್ಸ್ ಸಂದೇಹ ಪ್ರಕಟಿಸಿದೆ. ಭಾರತ ಕೂಡ ಚೀನದಂತೆ ಅತಿಹೆಚ್ಚು ಜನಸಂಖ್ಯೆ ಇರುವ ದೇಶವಾಗಿದ್ದು ಲಭ್ಯವಿರುವ ಪ್ರತಿರೋಧಕಗಳನ್ನು ಪರಿಗಣಿಸುವಾಗ ಭಾರತದ ವಿಷಯದಲ್ಲಿ ಆತಂಕವಿದೆ. ಜನಸಾಂಧ್ರತೆ ಇರುವುದರಿಂದ ಕೊರೊನಾ ವೈರಸ್ ವೇಗದಲ್ಲಿ ಹರಡಬಹುದು ಎಂದು ಇಂಟಲಿಜೆನ್ಸ್ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ.

ಆರೋಗ್ಯ ಸಹಸಚಿವರ ಸಹಿತ ಕೊರೊನಾ ದೃಢವಾಗಿರುವ ಇರಾನಿನ ಪರಿಸ್ಥಿತಿ ಅಮೆರಿಕ ನಿರೀಕ್ಷಿಸುತ್ತಿದೆ. ಕೊರೊನಾ ಪೀಡಿತರ ನೈಜ ಲೆಕ್ಕಗಳನ್ನು ಇರಾನ್ ಬಹಿರಂಗಪಡಿಸಿಲ್ಲ. ಈ ವಿಷಯದಲ್ಲಿ ನಾವು ಆತಂಕಗೊಂಡಿದ್ದೇವೆ ಎಂದು ಅಮೆರಿಕದ ಸ್ಟೇಟ್ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದರು.

ಕೆಲವು ಅಭಿವೃದ್ಧಿ ಶೀಲ ದೇಶಗಳ ಆರೋಗ್ಯ ವ್ಯವಸ್ಥೆ ಕೊರೊನಾ ಹರಡದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಇಂಟಲಿಜೆನ್ಸ್ ಅಮೆರಿಕ ಸರಕಾರಕ್ಕೆ ವರದಿ ಸಲ್ಲಿಸಿದೆ. ಹಲವು ಗುಪ್ತಚರ ಏಜೆನ್ಸಿಗಳು ಕೊರೊನಾ ವ್ಯಾಪಿಸುವ ಕುರಿತ ವರದಿಯನ್ನು ಅಮೆರಿಕಕ್ಕೆ ನೀಡಿದ್ದು ರಾಷ್ಟ್ರ ಸುರಕ್ಷೆ, ಆರ್ಥಿಕ ಕ್ಷೇತ್ರವನ್ನು ಬಾಧಿಸುವ ವಿಷಯ ಇದು. ಆದ್ದರಿಂದ ಕೊರೊನಾ ಹರಡುವುದರ ಮೇಲೆ ಅಮೆರಿಕ ಇಂಟಲಿಜೆನ್ಸ್ ಕಮಿಟಿ ಅತ್ಯಂತ ಗಂಭೀರವಾಗಿ ನಿಗಾ ಇರಿಸುತ್ತಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.