ದಕ್ಷಿಣ ಕೊರಿಯದಲ್ಲಿ ಭಯಾನಕ ಸ್ಥಿತಿ: 2000 ಮಂದಿಗೆ ಕೊರೊನಾ

0
685
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ಸಿಯೋಲ್, ಫೆ. 28: ಚೀನದ ಬೆನ್ನಿಗೆ ಅತಿಹೆಚ್ಚು ಕೊರೊನಾ ಪೀಡಿತ ಪ್ರಕರಣಗಳು ದಕ್ಷಿಣ ಕೊರಿಯದಿಂದ ವರದಿಯಾಗಿದೆ. 2022 ಮಂದಿಗೆ ದಕ್ಷಿಣ ಕೊರಿಯಾದಲ್ಲಿ ಕೊರೊನಾ ದೃಢಪಟ್ಟಿದ್ದು ಈವರೆಗೆ 13 ಮಂದಿ ಮೃತಪಟ್ಟಿದ್ದಾರೆ. ನಿನ್ನೆ 256 ಹೊಸ ಕೊರೊನಾ ರೋಗಿಗಳು ಪತ್ತೆಯಾದರು. ಇವರಲ್ಲಿ ಶೇ.90ರಷ್ಟು ಪ್ರಕರಣಗಳು ಕೊರಿಯದ ವೈರಸ್ ಪೀಡಿತ ಪ್ರದೇಶ ಡಯಾಗು ನಗರದಿಂದ ದೃಢಪಟ್ಟಿದೆ. ಮುಂಬರುವ ದಿನಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ 3000ಕ್ಕೇರಿಕೆಯಾಗಲಿದೆ. ಮುಂದಿನ ವಾರ ನಿರ್ಣಾಯಕ ವಾರವಾಗಲಿದೆ ಎಂದು ಡೆಯ್ಗು ಮೇಯರ್ ಕ್ವೀನ್ ಯಾಂಗ್ಜಿನ್ ಹೇಳಿದರು.

ಈ ನಡುವೆ, ನೈಜೀರಿಯದಲ್ಲಿ ಮೊದಲ ಕೊರೊನಾ ಪಾಸಿಟಿವ್ ವರದಿಯಾಗಿದೆ. ನೈಜೀರಿಯದಲ್ಲಿ ಕೆಲಸ ಮಾಡುವ ಇಟಲಿಯ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟಿದೆ. ಇಟಲಿಯ ಮಿಲಾನದಿಂದ ಇಲ್ಲಿಗೆ ಈತ ಬಂದಿದ್ದರು. ಆಫ್ರಿಕದಲ್ಲಿ ನೈಜೀರಿಯ, ಈಜಿಪ್ಟ್, ಅಲ್ಜೀರಿಯದಲ್ಲಿ ತಲಾ ಒಂದು ಕೊರೊನ ಪೀಡಿತ ಪ್ರಕರಣ ವರದಿಯಾಗಿದೆ.