ಸನ್ಮಾರ್ಗ ವಾರ್ತೆ
ಟೆಹ್ರಾನ್, ಫೆ. 28: ಇರಾನ್ ಉಪಾಧ್ಯಕ್ಷೆ ಮಸೌಬೆ ಎಬ್ಟೇಕರ್ ಗೂ ಕೊರೊನ ತಗುಲಿದ್ದು ದೃಢಪಟ್ಟಿದೆ. ಆರೋಗ್ಯ ಈಗ ತೃಪ್ತಿಕರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ. ಚೀನದ ಹೊರಗೆ ಅತಿಹೆಚ್ಚು ಕೊರೊನಾ ಸಾವು ಇರಾನ್ನಲ್ಲಿ ಸಂಭವಿಸಿದೆ.
ಈವರೆಗೆ 26 ಮಂದಿ ಮೃತಪಟ್ಟಿದ್ದಾರೆ. 106 ಮಂದಿಯಲ್ಲಿ ಹೊಸದಾಗಿ ಕೊರೊನಾ ದೃಢಪಟ್ಟಿದೆ. ಕೊರೊನಾದಿಂದ ಗುರುವಾರ ಚೀನದಲ್ಲಿ 44 ಮಂದಿ ಮೃತಪಟ್ಟಿದ್ದಾರೆ ಎಂದು ನ್ಯಾಶನಲ್ ಹೆಲ್ತ್ ಕಮಿಶನ್ ತಿಳಿಸಿದೆ. ಇದುವರೆಗೆ ಕೊರೊನಾದಿಂದ 2788 ಮಂದಿ ಚೀನದಲ್ಲಿ ಮೃತಪಟ್ಟಿದ್ದಾರೆ. ಹೊಸದಾಗಿ 327 ಮಂದಿಗೆ ಕೊರೊನಾ ವೈರಸ್ ತಗಲಿರುವುದು ಪತ್ತೆಯಾಗಿದೆ. ಬುಧವಾರ 433 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಇದರೊಂದಿಗೆ ರೋಗಪೀಡಿತರ ಸಂಖ್ಯೆ 78824ಕ್ಕೇರಿಕೆಯಾಗಿದೆ. ಹುಬೈ ಪ್ರಾಂತದಲ್ಲಿ ರೋಗ ಈಗ ಹೆಚ್ಚೆಚ್ಚು ಮಂದಿಗೆ ವ್ಯಾಪಿಸುತ್ತಿದೆ. ನೈಜೀರಿಯದಲ್ಲಿ ಒಬ್ಬರಿಗೆ ಕೊರೊನಾ ಇರುವುದು ದೃಢವಾಗಿದೆ. ಸಬ್ಸಹರಾನ್ ಆಫ್ರಿಕದಲ್ಲಿ ರೋಗ ದೃಢಪಟ್ಟಿದೆ.
ಇದುವರೆಗೆ 40 ದೇಶಗಳಲಿ ಕೊರೊನಾ ಹರಡಿದೆ. ದಕ್ಷಿಣ ಕೊರಿಯಾದಲ್ಲಿ 256 ಮಂದಿಗೆ ಹೊಸದಾಗಿ ಈ ರೋಗ ಹರಡೆದಿದೆ. ಒಟ್ಟು 2022 ಮಂದಿಗೆ ಕೊರೊನಾ ಇದೆ ಎಂದು ಕೊರಿಯದ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ ಇಲ್ಲಿ ಹದಿಮೂರು ಮಂದಿ ಮೃತಪಟ್ಟಿದ್ದಾರೆ.












