ಕೇಜ್ರಿವಾಲ್ ತನ್ನ ಆತ್ಮವನ್ನು ಮಾರುತ್ತಿದ್ದಾರೆ; ಆನಂದ್ ಪಟ್‍ವರ್ಧನ್‍ ಕಟು ಟೀಕೆ

0
1051

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 29: ದೇಶದ್ರೋಹ ಪ್ರಕರಣದಲ್ಲಿ ಕನ್ಹಯ್ಯ ಕುಮಾರ್ ರನ್ನು ವಿಚಾರಣೆ ನಡೆಸಲು ಅನುಮತಿ ನೀಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ರನ್ನು ಸಿನೆಮಾ ನಿರ್ದೇಶಕ ಆಕ್ಟಿವಿಸ್ಟ್ ಆನಂದ್ ಪಟವರ್ಧನ್ ಕಟುವಾಗಿ ಟೀಕಿಸಿದ್ದಾರೆ. ಕೇಜ್ರಿವಾಲ್ ತನ್ನ ಆತ್ಮವನ್ನು ಮಾರಿದ್ದಾರೆ ಎಂದು ಆನಂದ್ ಪಟ್‍ವರ್ಧನ್ ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಕನ್ಹಯ್ಯಾ ಕುಮಾರ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಲು ಫ್ಯಾಶಿಸ್ಟರಿಗೆ ಕೇಜ್ರಿವಾಲ್ ಅನುಮತಿ ನೀಡಿದ್ದಾರೆ. ದೇಶದ್ರೋಹ ಪ್ರಕರಣದಲ್ಲಿ ಜೆಎನಯು ವಿದ್ಯಾರ್ಥಿ ಯೂನಿಯನ್ ಮಾಜಿ ಅಧ್ಯಕ್ಷ ಸಿಪಿಐ ನಾಯಕ ಕನ್ಹಯ್ಯಾ ಕುಮಾರ್ ವಿರುದ್ಧ ವಿಚಾರಣೆ ಮಾಡಲು ಅನುಮತಿ ನೀಡಿದ ದಿಲ್ಲಿ ಸರಕಾರದ ಕ್ರಮಕ್ಕೆ ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ದೇಶದ್ರೋಹ ಪ್ರಕರಣದ ಬಗ್ಗೆ ದಿಲ್ಲಿ ಸರಕಾರಕ್ಕೆ ತಿಳುವಳಿಕೆಯಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅಭಿಪ್ರಾಯ ವ್ಯಕ್ತಪಡಿಸಿದ್ದರು. ದಿಲ್ಲಿ ಸರಕಾರದ ಕ್ರಮವನ್ನು ಬಲವಾಗಿ ತಳ್ಳಿಹಾಕುವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

2016ರಲ್ಲಿ ಕನ್ಹಯ್ಯ ಕುಮಾರ್ ಮತ್ತು ಒಂಬತ್ತು ಮಂದಿಯ ವಿರುದ್ಧ ದೇಶದ್ರೋಹ ಕೇಸು ದಾಖಲಿಸಿಕೊಳ್ಳಲಾಗಿತ್ತು. ವಿಶ್ವವಿದ್ಯಾನಿಲಯದಲ್ಲಿ ನಡೆದ ಅಫ್ಝಲ್ ಗುರು ಅನುಸ್ಮರಣಾ ಕಾರ್ಯಕ್ರಮದಲ್ಲಿ ದೇಶದ್ರೋಹ ಘೋಷಣೆ ಮೊಳಗಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಇವರನ್ನು ವಿಚಾರಣೆ ಮಾಡುವ ಅನುಮತಿಯನ್ನು ದಿಲ್ಲಿ ಸರಕಾರ ತಡಮಾಡಿದ್ದರಿಂದ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗದೆ ಸ್ಥಗಿತವಾಗಿತ್ತು. ಅನುಮತಿ ನೀಡದೆ ಇದ್ದುದಕ್ಕಾಗಿ ದೆಹಲಿ ಹೈಕೋರ್ಟು ದಿಲ್ಲಿ ಸರಕಾರವನ್ನು ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು.