ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 29: ದಿಲ್ಲಿ ಗಲಭೆ ಪೀಡಿತರಿಗೆ ಕ್ಯಾಂಪಸ್ಸಿನಲ್ಲಿ ವಾಸ ವ್ಯವಸ್ಥೆ ಮಾಡಬಾರದೆಂದು ಜೆಎನ್ಯು ಉಪಕುಲಪತಿ ಜಗದೀಶ್ ಕುಮಾರ್ ಸೂಚಿಸಿದ್ದಾರೆ. ಸುರಕ್ಷಾ ಸಮಸ್ಯೆಗಳನ್ನು ಮುಂದಿಟ್ಟು ಉಪಕುಲಪತಿ ಈ ನಿರ್ದೇಶ ನೀಡಿದ್ದಾರೆ ಎನ್ನಲಾಗಿದೆ. ದಿಲ್ಲಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂದು ಎಲ್ಲರೂ ಬಯಸುತ್ತಾರೆ. ಗಲಭೆ ಪೀಡಿತರಿಗೆ ಸಾಧ್ಯವಿರುವ ಎಲ್ಲ ಸಹಾಯ ಮಾಡಲಾಗುವುದು. ಕ್ಯಾಂಪಸ್ಸಿನಲ್ಲಿ ಕೆಲವು ವಿದ್ಯಾರ್ಥಿಗಳು ಗಲಭೆ ಪೀಡಿತರನ್ನು ಇಲ್ಲಿಗೆ ಕರೆಯುತ್ತಿದ್ದಾರೆ. ಈ ಹಿಂದೆ ಹೊರಗಿನಿಂದ ಬಂದು ಜನರು ಹೊಡೆದಿದ್ದಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದರೆಂದು ಉಪಕುಲಪತಿ ತಿಳಿಸಿದರು.
ಕ್ಯಾಂಪಸ್ನ ಸುರಕ್ಷೆ ಪ್ರಧಾನವಾಗಿದೆ. ಆದ್ದರಿಂದ ಹೊರಗಿನವರಿಗೆ ಕ್ಯಾಂಪಸ್ನಲ್ಲಿ ಇರಲು ಕರೆಯಬೇಡಿರಿ. ಗಲಭೆ ಪೀಡಿತರಿಗೆ ಮಾನವೀಯವಾದ ಎಲ್ಲ ಸಹಾಯಗಳನ್ನು ಕೊಡೋಣ. ಅದಕ್ಕೆ ಜೆಎನ್ಯು ಆಡಳಿತದ ಬೆಂಬಲವೂ ಇದೆ. ಈಗ ಕ್ಯಾಂಪಸ್ ಶಾಂತವಾಗಿದೆ ಎಂದು ಅವರು ಹೇಳಿದರು.
ಇದಕ್ಕೆ ಸಂಬಂಧಿಸಿದ ನೋಟಿಸನ್ನು ಜೆಎನ್ಯು ಅಧಿಕಾರಿಗಳು ಹೊರಡಿಸಿದ್ದಾರೆ. ನೋಟಿಸು ಕಡೆಗಣಿಸಿ ಮುಂದುವರಿದರೆ ಶಿಕ್ಷಾ ಕ್ರಮಗಳು ಜರಗಲಿದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.












