ಸನ್ಮಾರ್ಗ ವಾರ್ತೆ
ಮೊರೆನ, ಮಾ. 3: ಪಿಯುಸಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಸಂಬಂಧಿಕರ ಮೂರು ವರ್ಷದ ಮಗುವನ್ನು ಅಪಹರಿಸಿದ್ದ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ರಣ್ಬೀರ್ ಎಂಬ ಹದಿನೆಂಟು ವರ್ಷದ ಬಾಲಕ ಈ ಕೃತ್ಯವೆಸಗಿದ್ದಾನೆ. ಮಧ್ಯಪ್ರದೇಶದ ಮೊರನದಲ್ಲಿ ಸೋಮವಾರ ರಾತ್ರೆ ಈ ಘಟನೆ ನಡೆದಿದೆ.
ಮಗು ಮಲಗಿತ್ತು. ಕೈಕಾಲುಗಳನ್ನು ಕಟ್ಟಿ ದೂರದ ಹೊಲದಲ್ಲಿ ಇರಿಸಿದ್ದ. ಮಗು ಕಾಣೆಯಾಗಿದ್ದು ಬೆಳಗಿನ ವೇಳೆ ಗೊತ್ತಾಯಿತು. ನಂತರ ಮಗುವಿನ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಪತ್ರ ವೊಂದು ಸಿಕ್ಕಿದ್ದು ಅದರಲ್ಲಿದ್ದ ಅಬದ್ಧಗಳಿಂದಾಗಿ ಪೊಲೀಸರು ಅಪಹರಣಕಾರನನ್ನು ಪತ್ತೆಹಚ್ಚಿದ್ದಾರೆ. ಮಂಗಳವಾರ ನಡೆಯುವ ಪರೀಕ್ಷೆಗೆ ರಣ್ಬೀರ್ ಹೋಗಬಾರದೆಂದು ಪತ್ರದಲ್ಲಿ ಬರೆಯಲಾಗಿತ್ತು. ಇದು ಪೊಲೀಸರಲ್ಲಿ ಶಂಕೆಗೆ ಕಾರಣವಾಗಿ ನಂತರ ರಣ್ಬೀರ್ ನನ್ನು ಹೆಚ್ಚಿನ ತನಿಖೆಗೊಳಪಡಿಸಿದ್ದರು. ಆತ ಮಗುವನ್ನು ಹುಡುಕುವ ನೆಪದಲ್ಲಿ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದ. ಪೊಲೀಸರು ಮಗುವನ್ನು ಹುಡುಕಿ ಸುರಕ್ಷಿತವಾಗಿ ಹೆತ್ತವರ ಕೈಗೊಪ್ಪಿಸಿದ್ದಾರೆ. ರಣ್ಬೀರ್ ವಿರುದ್ಧ ಕೇಸು ದಾಖಲಿಸಿದ್ದಾರೆ.












