ದಿಲ್ಲಿ ಗಲಭೆ ಗದ್ದಲ: ರಾಜ್ಯಸಭೆ, ಲೋಕಸಭೆ ಸ್ಥಗಿತ

0
668

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.3: ದಿಲ್ಲಿ ಗಲಭೆಗೆ ಸಂಬಂಧಿಸಿ ತುರ್ತು ಚರ್ಚೆ ನಡೆಸಬೇಕು ಮತ್ತು ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ನಡೆಸಿದ ಗದ್ದಲದ ಹಿನ್ನೆಲೆಯಲ್ಲಿ ಪಾರ್ಲಿಮೆಂಟಿನ ಎರಡೂ ಸಭೆಗಳು ಪ್ರಕ್ಷುಬ್ಧಗೊಂಡಿತು. ಎರಡು ಸಭೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ರಾಜ್ಯಸಭೆ ಮಧ್ಯಾಹ್ನ ಎರಡು ಗಂಟೆವರೆಗೂ ಲೋಕಸಭೆ 12 ಗಂಟೆವರೆಗೂ ಸ್ಥಗಿತವಾಗಿತ್ತು.

ನಿರಂತರ ಎರಡನೆ ದಿನವೂ ದಿಲ್ಲಿ ಗಲಭೆಯ ಹೆಸರಿನಲ್ಲಿ ಪಾರ್ಲಿಮೆಂಟಿನಲ್ಲಿ ಕಲಾಪ ನಡೆದಿಲ್ಲ. ಸಭೆಗಳಲ್ಲಿ ಪ್ಲಕಾರ್ಡ್ ತರುವುದನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿಷೇಧಿಸಿದ್ದಾರೆ. ಸ್ಪೀಕರ್ ರ ಕ್ರಮವನ್ನು ಪ್ರತಿಪಕ್ಷಗಳು ಪ್ರತಿಭಟಿಸಿವೆ. ಎರಡನೆ ಹಂತದ ಬಜೆಟ್ ಅಧಿವೇಶನ ಎರಡನೇ ದಿನವಾದ ಇಂದು ಸಭೇ ಸೇರಿದೊಡನೆ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಅದನ್ನು ನಿಲ್ಲಿಸಿ ದಿಲ್ಲಿ ಗಲಭೆ ಚರ್ಚಿಸಬೇಕೆಂದು ಆಗ್ರಹಿಸಿದವು. ಇದೇವೇಳೆ ದಿಲ್ಲಿ ಗಲಭೆ ಬಗ್ಗೆ ಸ್ಪೀಕರ್ ತೀರ್ಮಾನಿಸುವ ಸಮಯದಲ್ಲಿ ಚರ್ಚಿಸಬಹುದು ಎಂದು ಸರಕಾರ ತಿಳಿಸಿತು. ತುರ್ತಾಗಿ ಈ ವಿಷಯ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಬೇಡಿಕೆಯಿಟ್ಟಿವೆ.

ಸೋಮವಾರ ಲೋಕಸಭೆಯಲ್ಲಿ ನಡೆದ ಗದ್ದಲವು ಕಾಂಗ್ರೆಸ್ ಬಿಜೆಪಿ ಸದಸ್ಯರ ಹೊಯ್‍ ಕೈವರೆಗೂ ತಲುಪಿತ್ತು. ತನಗೆ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಕಾಂಗ್ರೆಸ್ಸಿನ ಕೇರಳ ಸಂಸದೆ ರಮ್ಯ ಹರಿದಾಸನ್ ಸ್ಪೀಕರಿಗೆ ದೂರು ನೀಡಿದ್ದಾರೆ.