ಕೊರೊನಾ ಸೊಂಕು: ಮನುಷ್ಯರಿಂದ ಸಾಕು ಪ್ರಾಣಿಗಳಿಗೆ

0
764

ಸನ್ಮಾರ್ಗ ವಾರ್ತೆ

ಹಾಂಕಾಂಗ್, ಮಾ. 5: ಮನುಷ್ಯರಿಂದ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೊರೊನಾ ವೈರಸ್ ಹರಡುವುದು ಪತ್ತೆಯಾಗಿದೆ. ಹಾಂಕಾ೦ಗ್‍ನಲ್ಲಿ ಮಹಿಳೆಯೊಬ್ಬರ ಸಾಕು ನಾಯಿಯಲ್ಲಿ ಕೊರೊನಾ ದೃಢಪಟ್ಟಿದೆ. ಮನುಷ್ಯರಿಂದ ಪ್ರಾಣಿಗಳಿಗೂ ವೈರಸ್ ಬಾಧೆ ತಟ್ಟುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಂಕಾಂಗಿನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ 60 ವರ್ಷದ ಮಹಿಳೆಯ ಸಾಕು ನಾಯಿಗೆ ಕೊರೊನಾ ಅಂಟಿದೆ ಎಂಬ ಶಂಕೆಯಿಂದ ಪರೀಕ್ಷೆಗೆ ಗುರಿಪಡಿಸಿದಾಗ ನಾಯಿಗೂ ಕೊರೊನಾ ವೈರಸ್ ತಗಲಿದ್ದು ದೃಢೀಕರಣಗೊಂಡಿತು ಎಂದು ಮೂಲಗಳು ತಿಳಿಸಿವೆ.

ರೋಗ ದೃಢಪಡಿಸಲು ಹಲವು ಬಾರಿ ಪಮೇರಿಯನ್ ನಾಯಿಗಳ ಸ್ಯಾಂಪಲ್‍ಗಳನ್ನು ಪರಿಶೀಲಿಸಲಾಗಿತ್ತು. ಈ ಪರೀಕ್ಷೆಗಳಲ್ಲಿ ಕೊರೊನಾ ಪತ್ತೆಯಾಯಿತು ಎಂದು ಹಾಂಕಾಂಗ್ ಅಗ್ರಿಕಲ್ಚರ್, ಫಿಶರೀಸ್ ಆಂಡ್ ಕನ್ಸರ್ವೇಶನ್ ಇಲಾಖೆ ತಿಳಿಸಿದೆ. ಪಶು ವೈದ್ಯರು, ಆರೋಗ್ಯ ಕಾರ್ಯಕರ್ತರು, ವರ್ಲ್ಡ್ ಆರ್ಗನೈಸೇಷನ್ ಫಾರ್ ಅನಿಮಲ್ ಹೆಲ್ತ್ ಸಂಸ್ಥೆಯು ಮನುಷ್ಯರಿಂದ ಪ್ರಾಣಿಗಳಿಗೆ ಕೊರೊನಾ ಬಂತೆಂದು ತಿಳಿಸಿದ್ದಾರೆ. ಆದರೆ ನಾಯಿಯಲ್ಲಿ ವೈರಸ್ ಬಾಧಿಸಿ ಲಕ್ಷಣವೂ ಕಂಡು ಬಂದಿರಲಿಲ್ಲ ಎಂದು ಹೇಳಿದರು.

ಸಾಕು ನಾಯಿಗಳಿಗೆ ರೋಗ ಕಂಡು ಬಂದದ್ದರಿಂದ ಎಲ್ಲ ಸಾಕು ಪ್ರಾಣಿಗಳನ್ನು ಹದಿನಾಲ್ಕು ದಿವಸ ನಿಗಾದಲ್ಲಿರಿಸಲು ಹಾಂಕಾಂಗ್ ಸರಕಾರ ಆದೇಶ ಹೊರಡಿಸಿದೆ. ಈಗ ಇಲ್ಲಿ ಎರಡು ನಾಯಿಗಳು ಐಸೊಲೇಶನ್‍ನಲ್ಲಿವೆ.