ಸುನ್ನಿ ವಿದ್ಯಾಭ್ಯಾಸ ಬೋರ್ಡಿನಿಂದ 1 ಲಕ್ಷ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮದ್ರಸಾ- ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ರಿಂದ ವಿನೂತನ ಪ್ರಯೋಗ

0
1090

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಮಾ. 17: ಕೊರೊನಾ ವ್ಯಾಪಿಸುತ್ತಿರುವ ನಿಮಿತ್ತ ಅದನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ರಾಜ್ಯಸರಕಾರ ಸೂಚಿಸಿದ್ದರಿಂದ ಮದ್ರಸಾಗಳಿಗೆ ಕೇರಳದಲ್ಲಿ ರಜೆ ಕೊಡಲಾಗಿದೆ. ಆದರೆ ಸುನ್ನಿ ವಿದ್ಯಾಭ್ಯಾಸ ಬೋರ್ಡಿನ ಅಧೀನದಲ್ಲಿ ನಡೆಯುವ ಮದ್ರಸಗಳ ಮಕ್ಕಳು ಮನೆಯಲ್ಲಿ ಕಲಿಯುವುದಕ್ಕೆ ಅನುಕೂಲವಾಗುವ ಉದ್ದೇಶದಿಂದ ಆನ್‍ಲೈನ್ ತರಗತಿ ಆರಂಭಿಸಲಾಗುತ್ತಿದೆ. ಈ ತಿಂಗಳು 21ಕ್ಕಿಂತ ಮೊದಲೇ ಅಧ್ಯಯನ ವರ್ಷದ ಕೊನೆಯವರೆಗೆ ಆನ್‍ಲೈನ್ ಕ್ಲಾಸುಗಳ ಮೂಲಕ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಮದ್ರಸಾ ಪಾಠಗಳನ್ನು ತಲುಪಿಸುವ ಗುರಿಯನ್ನು ವಿದ್ಯಾಭ್ಯಾಸ ಬೋರ್ಡ್ ಇಟ್ಟುಕೊಂಡಿದೆ.

ಕೊರೊನಾ ಹಿನ್ನೆಲೆಯಲ್ಲಿ ತಂತ್ರಜ್ಞಾನದ ಸಹಾಯ ಪಡೆದು ವಿದ್ಯಾರ್ಥಿಗಳಿಗೆ ಪಾಠಬೋಧಿಸುವ ಕುರಿತು ವಿದ್ಯಾಭ್ಯಾಸ ಬೋರ್ಡಿನ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ವಿವರಿಸಿದರು. ಪವಿತ್ರ ಕುರ್‍ಆನ್ , ಇತಿಹಾಸ, ಹದೀಸ್, ಕರ್ಮಶಾಸ್ತ್ರ, ವಿಶ್ವಾಸ ಶಾಸ್ತ್ರ ತರಗತಿಗಳನ್ನು ಈ ಮೂಲಕ ಕಲಿಸಲಾಗುವುದು. ವಿದೇಶದಲ್ಲಿರುವವರಿಗೆ ಕೂಡ ಇದು ಪ್ರಯೋಜವಾಗಲಿದೆ ಎಂದು ಕಾಂತಪುರಂ ಹೇಳಿದರು.