ಸನ್ಮಾರ್ಗ ವಾರ್ತೆ
ಬೆಂಗಳೂರು, ಸೆ. 17: ಕರ್ನಾಟಕದಲ್ಲಿ ಹೊಸದಾಗಿ ಇಬ್ಬರಿಗೆ ಕೊರೊನ ದೃಢಪಟ್ಟಿದೆ. ಕಲ್ಬುರ್ಗಿಯಲ್ಲಿ ಕೊರೊನಾಕ್ಕೆ ಚಿಕಿತ್ಸೆ ನೀಡಿದ ವೈದ್ಯರಿಗೆ ಕೊರೊನಾ ಬಾಧಿಸಿದೆ. ಚಿಕಿತ್ಸೆ ನೀಡಿದ ರೋಗಿ ಮೃತಪಟ್ಟಿದ್ದು ಇನ್ನೊಬ್ಬರು ಇಂಗ್ಲೆಂಡಿನಿಂದ ಆಗಮಿಸಿದ 20 ವರ್ಷದ ಯುವತಿಗೆ ವೈರಸ್ ತಗಲಿದೆ. ಸೌದಿಯಲ್ಲಿ ಉಮ್ರ ನಿರ್ವಹಿಸಿ ಬಂದ 76 ವರ್ಷದ ಹಿರಿಯ ವ್ಯಕ್ತಿ ಕಳೆದ ವಾರ ಮೃತಪಟ್ಟಿದ್ದರು. ರೋಗಲಕ್ಷಣ ಕಂಡು ಬಂದಿದ್ದ ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ವೈರಸ್ ತಗಲಿದೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೊನಾ ವೈರಸ್ ಹತ್ತು ಮಂದಿಗೆ ದೃಢಪಟ್ಟಂತಾಗಿದೆ.
ಭಾರತದಲ್ಲಿ 125 ಮಂದಿಗೆ ಇದುವರೆಗೆ ಕೊರೊನಾ ದೃಢಪಟ್ಟಿದ್ದು 13 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.












