ಸನ್ಮಾರ್ಗ ವಾರ್ತೆ
ಯೊಕಾಹಾಮ (ಜಪಾನ್) ಮಾ. 17: ಅಭಯಾಶ್ರಯ ಕೇಂದ್ರದಲ್ಲಿದ್ದ ಹತ್ತೊಂಬತ್ತು ಭಿನ್ನಸಾಮರ್ಥ್ಯದವರನ್ನು ಇರಿದು ಕೊಲೆ ಮಾಡಿದ ಟೊಕಿಯೊದ ಸಗಮಿಹರ ಅಭಯಾಶ್ರಯದ ಮಾಜಿ ಸಿಬ್ಬಂದಿ ಸತೋಷಿ ಯುಮಾಟ್ಸು(30) ಎಂಬಾತನಿಗೆ ಯಕೊಹಾಮ ಜಿಲ್ಲಾ ಕೋರ್ಟು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ತನ್ನ ಅಪರಾಧವನ್ನು ಈತ ನಿರಾಕರಿಸಿಲ್ಲ. ಮಾನಸಿಕ ಸಮಸ್ಯೆ ಅನುಭವಿಸುವವರಿಗೆ ಬದುಕುವ ಹಕ್ಕಿಲ್ಲ. ಸಮಾಜಕ್ಕಾಗಿ ತಾನಿದು ಮಾಡಿದೆ ಎಂದು ಸ್ಥಳೀಯ ಪತ್ರಿಕೆಯೊಂದಕ್ಕೆ ಹೇಳಿಕೊಂಡಿದ್ದ.
ಇದೇವೇಳೆ, ಗಾಂಜಾ ಸೇವಿಸಿದ್ದಾಗ ಆರೋಪಿ ಈ ಕೃತ್ಯವೆಸಗಿದ್ದು ಆದ್ದರಿಂದ ಆರೋಪಿ ಅಪರಾಧಿ ಅಗುವುದಿಲ್ಲ ಎಂದು ವಕೀಲರು ವಾದಿಸಿದ್ದರು. ಯೊಕಾಹೋಮ ಜಿಲ್ಲಾ ಕೋರ್ಟು ಇದನ್ನು ತಿರಸ್ಕರಿಸಿದ್ದು ಆರೋಪಿಗೆ ಮರಣದಂಡನೆ ತೀರ್ಪು ನೀಡಿತು. 2016 ಜುಲೈ 26ರಂದು 19 ಮಂದಿ ಭಿನ್ನ ಸಾಮರ್ಥ್ಯದವರನ್ನು ಈತ ನಿರ್ದಯವಾಗಿ ಹತ್ಯೆಮಾಡಿದ್ದನು.












