ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್, ಮಾ. 19: ಅಮೆರಿಕ ಜನಪ್ರತಿನಿಧಿ ಸಭೆಯ ಡೆಮಕ್ರಾಟಿಕ್ ಪಾರ್ಟಿ ಸದಸ್ಯರಾದ ಮರಿಯಾ ಡಯಾಸ್ ಬಲಾರ್ಟ್ ಮತ್ತು ಬೆನ್ ಮೆಕ್ ಆಡಂರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಕಾಂಗ್ರೆಸ್ನ ಮೂವರು ರಿಪಬ್ಲಿಕನ್ ಪಾರ್ಟಿ ಸದಸ್ಯರು ಸ್ಟೀವ್ ಸ್ಕಲೈಸ್, ಡ್ರೂಫೆರ್ ಗುಸಾನ್, ಆನ್ ವಾಗ್ನರ್ ಸ್ವಯಂ ನಿಗಾದಲ್ಲಿದ್ದಾರೆ. ಇವರನ್ನು ಕೊರೊನ ಮುನ್ನೆಚ್ಚರಿಕೆ ಎಂಬ ನಿಟ್ಟಿನಲ್ಲಿ ನಿಗಾದಲ್ಲಿರಿಸಲಾಗಿದೆ.
ಕಳೆದ ವಾರ ಡೆಮಕ್ರಾಟಿಕ್ ಪಾರ್ಟಿಯ ಬೆನ್ ಮತ್ತು ಬಲಾರ್ಟ್ರಲ್ಲಿ ಕೊರೊನಾದ ಮೊದಲ ಲಕ್ಷಣ ಗೋಚರಿಸಿತ್ತು. ಕಾಂಗ್ರೆಸ್ನಲ್ಲಿ ನಡೆದ ಕೊರೊನಾ ರಿಲೀಸ್ ಪ್ಯಾಕೇಜ್ ಕುರಿತು ಮತದಾನದಲ್ಲಿ ಇಬ್ಬರೂ ಭಾಗವಹಿಸಿದ್ದರು ಎಂದು ವಾಷ್ಟಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿತ್ತು. ಈಗ ಅಮೆರಿಕದಲ್ಲಿ ಕೊರೊನಾ ವೈರಸ್ ಪೀಡಿತರ ಸಾವಿನ ಸಂಖ್ಯೆ 135ಕ್ಕೇರಿದ್ದು 8000 ಮಂದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.












