ಪ್ರಮಾಣವಚನ ಸ್ವೀಕರಿಸಿದ ರಂಜನ್ ಗೊಗೊಯಿ: ನಾಚಿಕೆಗೇಡು ಎಂದ ಪ್ರತಿಪಕ್ಷ

0
1075

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 19: ಸುಪ್ರೀಂ ಕೋರ್ಟಿನ ಮಾಜಿ ಜಸ್ಟಿಸ್ ರಂಜನ್ ಗೊಗೊಯಿ ರಾಜಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯ ನಡುವೆ ಅವರ ಪ್ರಮಾಣವಚನ ಕಾರ್ಯಕ್ರಮ ನಡೆದಿದೆ. ಗೊಗೊಯಿ ಪ್ರಮಾಣವಚನಕ್ಕೆ ಆಗಮಿಸಿದಾಗ ಇದು ನಾಚಿಕೆಗೇಡು ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ನಾಲ್ಕು ತಿಂಗಳ ಹಿಂದೆ ಗೊಗೊಯಿ ಸುಪ್ರೀಮ್ ಕೋರ್ಟಿನಿಂದ ನಿವೃತ್ತಿ ಹೊಂದಿದ್ದರು.

ಬಾಬರಿ ಮಸೀದಿ ಸಹಿತ ಪ್ರಕರಣಗಳಲ್ಲಿ ನಿರ್ಣಾಯಕ ತೀರ್ಪು ಕೊಟ್ಟ ಬಳಿಕ ಅವರು ನಿವೃತ್ತರಾಗಿದ್ದರು. ಇದರ ಬೆನ್ನಿಗೆ ಅವರನ್ನು ಕೇಂದ್ರ ಸರಕಾರ ರಾಜ್ಯಸಭೆಗೆ ತಂದಿದೆ.