ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ.19: ದೇಶದಲ್ಲಿ ಕರೊನಾ ಪೀಡಿತರ ಸಂಖ್ಯೆ 170 ಆಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಂದಿಗೆ ಕೊರೊನಾ ಇದೆ. ಮೂವರು ವಿದೇಶಿ ಪ್ರಜೆಗಳ ಸಹಿತ 47 ಮಂದಿಗೆ ಮಹಾರಾಷ್ಟ್ರದಲ್ಲಿ ಕೊರೊನಾ ದೃಢಪಟ್ಟಿದೆ. ಚಂಡೀಗಡದಲ್ಲಿ ಮೊದಲ ಕೊರೊನಾ ರೋಗ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿದೆ. ಇತ್ತೀಚೆಗೆ ಇವರು ಇಂಗ್ಲೆಂಡಿನಿಂದ ಬಂದಿದ್ದರು. ಚಂಡಿಗಡ ಸೆಕ್ಟರ್ 21ರಲ್ಲಿ ಯುವತಿಯಲ್ಲಿ ಮಾರ್ಚ್ 15ರಂದು ರೋಗ ಲಕ್ಷಣಗಳು ಕಂಡು ಬಂದಿದೆ. ಆಂಧ್ರದಲ್ಲಿ ಇನ್ನೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಜಮ್ಮುಕಾಶ್ಮೀರದಲ್ಲಿ ಪ್ರವಾಸಿಗರಿಗೂ ಭಕ್ತರಿಗೂ ಧಾರ್ಮಿಕ ಸ್ಥಳಗಳಲ್ಲಿ ಒಟ್ಟುಗೂಡುವುದಕ್ಕೆ ನಿರ್ಬಂಧ ಇದೆ. ರಾಷ್ಟ್ರೀಯ ವಿಪತ್ತು ನಿವಾರಣೆ 2005ರ ಕಾನೂನು ಪ್ರಕಾರ ಸರಕಾರ ನಿಯಂತ್ರಣ ಹೇರಿದೆ. ಕಾಶ್ಮೀರದಲ್ಲಿ ಬುಧವಾರ ಮೊದಲ ಕೊರೊನಾ ರೋಗಿ ಕಂಡು ಬಂದಿದ್ದರು. ಶ್ರೀನಗರದಲ್ಲಿನ ವ್ಯಕ್ತಿಗೆ ಅಲ್ಲಿ ಕೊರೊನಾ ತಗಲಿದ್ದು ದೃಢಪಟ್ಟಿದೆ.
ಕರ್ನಾಟಕ, ದಿಲ್ಲಿ, ಮಹಾರಾಷ್ಟ್ರದಲ್ಲಿ ಒಬ್ಬೊಬ್ಬರಂತೆ ಮೂರು ಮಂದಿ ದೇಶದಲ್ಲಿ ಇದುವರೆಗೆ ಕೊರೊನಾಕ್ಕೆ ಬಲಿಯಾಗಿದ್ದಾರೆ. ಮುನ್ನೆಚ್ಚರಿಕೆಯಾಗಿ ಉತ್ತರ ಪ್ರದೇಶ, ರಾಜಸ್ಥಾನ ಸಹಿತ ಹಲವು ರಾಜ್ಯಗಳಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಹೊರಡಿಸಲಾಗಿದೆ.












