ಕೊನೆಯ ರಾತ್ರಿ ನಿದ್ದೆ ಮಾಡದ ನಿರ್ಭಯ ಆರೋಪಿಗಳು

0
911

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 20: ನಿರ್ಭಯ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಗುರುವಾರ ರಾತ್ರೆ ಅಸ್ವಸ್ಥರಾಗಿದ್ದರು ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ ಇವರಿಗೆ ಮರಣದಂಡನೆ ವಿಧಿಸುವುದು ನಿಗದಿಯಾಗಿತ್ತು. ಆದ್ದರಿಂದ ಆರೋಪಿಗಳಲ್ಲಿ ಬೇಗನೆ ಮಲಗಿಕೊಳ್ಳಿ ಮತ್ತು ಅಗತ್ಯ ಆರಾಮ ಮಾಡಿಕೊಳ್ಳಿ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರು.

ಗಲ್ಲು ಶಿಕ್ಷೆ ಮುಂದೂಡಲಾಗುವುದು ಎಂಬ ನಿರೀಕ್ಷೆ ಗುರುವಾರ ಮಧ್ಯರಾತ್ರೆ ದಿಲ್ಲಿ ಹೈಕೋರ್ಟು ವಿಚಾರಣೆಗೆತ್ತಿಕೊಂಡದ್ದರಿಂದ ಹುಸಿಯಾಯಿತು. ಈ ಹಿಂದೆ ಹಲವು ಬಾರಿ ಆಗಿದ್ದಂತೆ ಗಲ್ಲು ಮುಂದೂಡಲ್ಪಡಬಹುದು ಎಂಬ ನಿರೀಕ್ಷೆ ಆರೋಪಿಗಳಿತ್ತು. ಆರೋಪಿಗಳಾದ ಅಕ್ಷಯ್, ಪವನ್, ವಿನಯ್, ಮುಖೇಶ್ ರಾತ್ರೆ ನಿದ್ದೆ ಮಾಡದೆ ಎಚ್ಚರವಾಗಿದ್ದರು. ಗಲ್ಲು ಜಾರಿಗೊಳಿಸುವ ಮೊದಲು ನಾಲ್ವರಲ್ಲಿ ಸ್ನಾನ ಮಾಡಲು ಹೇಳಲಾಯಿತು. ಯಾರೂ ಸ್ನಾನ ಮಾಡಲಿಲ್ಲ. ಬೆಳಗ್ಗಿನ ಉಪಹಾರವನ್ನೂ ಸೇವಿಸಲಿಲ್ಲ. ಕೊನೆಯ ದಿನ ಜೈಲಿನ ಸಿಬ್ಬಂದಿಗಳೊಂದಿಗೆ ಅಸಹಕಾರ ತೋರಿಸಿದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.